ಶನಿವಾರ, ಏಪ್ರಿಲ್ 10, 2021
30 °C

ನಾನು ಆರಾಮವಾಗಿದ್ದೇನೆ: ಉಪೇಂದ್ರ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಬ್ಜ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ನಟ ಉಪೇಂದ್ರ ಅವರ ತಲೆಗೆ ರಾಡ್‌ನಿಂದ ಏಟು ಬಿದ್ದಿದ್ದು, ಘಟನೆ ಬೆನ್ನಲ್ಲೇ ‘ನಾನು ಆರಾಮವಾಗಿದ್ದೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಮಿನರ್ವ ಮಿಲ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಅದ್ಧೂರಿ ಸೆಟ್‌ಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ತೈಲ ಮಾರ್ಕೆಟ್‌ ನಡುವಿನಲ್ಲಿ ನಡೆಯುವ ಸಾಹಸ ದೃಶ್ಯದ ಚಿತ್ರೀಕರಣವಾಗುತ್ತಿತ್ತು. ಈ ಸಂದರ್ಭದಲ್ಲಿ ಸಹನಟ ಬೀಸುವ ರಾಡ್‌ನಿಂದ, ಉಪೇಂದ್ರ ಅವರು ಬಗ್ಗಿ ತಪ್ಪಿಸಿಕೊಳ್ಳಬೇಕಿತ್ತು. ಈ ವೇಳೆ ಆಕಸ್ಮಿಕವಾಗಿ ರಾಡ್‌ ಉಪೇಂದ್ರ ಅವರ ತಲೆಗೆ ಬಡಿದಿದೆ. ರಾಡ್‌ ಬಲ ಕಿವಿಯ ಮೇಲ್ಭಾಗದಲ್ಲಿ ತಲೆಗೆ ಸವರಿಕೊಂಡು ಹೋದ ಕಾರಣ ದೊಡ್ಡ ಅನಾಹುತ ಸಂಭವಿಸಿಲ್ಲ. ಇದಾದ ಬಳಿಕವೂ ತಮ್ಮ ಪಾತ್ರದ ಚಿತ್ರೀಕರಣ ಮುಗಿಸಿಕೊಂಡೇ ಅವರು ಅಲ್ಲಿಂದ ತೆರಳಿದ್ದಾರೆ. 

ಘಟನೆ ಕುರಿತು ಟ್ವೀಟ್‌ ಮಾಡಿರುವ ಉಪೇಂದ್ರ, ‘ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಗಾಬರಿಪಡಬೇಕಾದದ್ದು ಏನೂ ಇಲ್ಲ’ ಎಂದಿದ್ದಾರೆ. ಜೊತೆಗೆ ಫೋಟೊ ಕೂಡಾ ಅಪ್‌ಲೋಡ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು