ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್‌ಕ್ರೆಡಿಬಲ್ ಮಂಕಿ ಮ್ಯಾನ್’ ಚಿತ್ರೀಕರಣ

Last Updated 16 ಡಿಸೆಂಬರ್ 2020, 21:11 IST
ಅಕ್ಷರ ಗಾತ್ರ

ಕಾರ್ಗಲ್‌: ವಿಶ್ವವಿಖ್ಯಾತ ಜೋಗ ಜಲಪಾತವನ್ನು ಬರಿಗೈಲಿ ಹತ್ತಿ ಸಾಹಸ ಮೆರೆದಿದ್ದ ಚಿತ್ರದುರ್ಗದ ಸಾಹಸಿ ಕೋತಿರಾಜ್ ಎಂದೇ ಹೆಸರಾಗಿರುವ ಜ್ಯೋತಿರಾಜ್ ಅವರ ನೈಜ ಕಥೆಯನ್ನು ಆಧರಿಸಿ ಚಿತ್ರೀಕರಿಸುತ್ತಿರುವ ‘ಇನ್‌ಕ್ರೆಡಿಬಲ್ ಮಂಕಿ ಮ್ಯಾನ್’ ಇಂಗ್ಲಿಷ್ ಮತ್ತು ಕನ್ನಡ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ಜೋಗದಲ್ಲಿ ನಡೆಯುತ್ತಿದೆ.

ಜಲಪಾತದ ಮೂಲೆ ಮೂಲೆಗಳಲ್ಲಿರುವ ಕಂದಕಗಳಲ್ಲಿ ಬರಿಗೈಲಿ ಕೋತಿರಾಜ್‌ ಹತ್ತಿ ಇಳಿಯುತ್ತಿದ್ದರು. ಚಿತ್ರಕ್ಕಾಗಿ ಕೃತಕವಾದ ಜೀವರಕ್ಷಕ ಸುರಕ್ಷತಾ ಸಾಧನಗಳೊಂದಿಗೆ ಹತ್ತಿ ಇಳಿಯುತ್ತಿದ್ದ ದೃಶ್ಯವನ್ನು ನೋಡುಗರು ಕುತೂಹಲದಿಂದ ವೀಕ್ಷಿಸಿದರು.

ರೋರರ್ ಜಲಪಾತದ ಮೇಲ್ಮೈನಲ್ಲಿ ಅಳವಡಿಸಿದ್ದ ವ್ಯವಸ್ಥಿತವಾದ ಹಗ್ಗದ ಸಹಾಯದೊಂದಿಗೆ ಮಂಗಳವಾರ ಕೋತಿರಾಜ್ 960 ಅಡಿ ಆಳದ ಜಲಪಾತವನ್ನು ಏರುವ ದೃಶ್ಯವನ್ನು ಮೊದಲ ಹಂತದಲ್ಲಿ ಚಿತ್ರೀಕರಿಸಲಾಗಿದೆ.

ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ ಸ್ಟ್ಯಾನ್ ಲೀ ನಿರ್ದೇಶನದಲ್ಲಿ ಒಂದು ವಾರ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಶೇ 70ರಷ್ಟು ಭಾಗವನ್ನು ಜೋಗ ಜಲಪಾತದಲ್ಲಿ ಚಿತ್ರೀಕರಿಸಲಾಗುತ್ತಿದೆ.

‘15 ಬಾರಿ ಜೋಗದ ಗುಂಡಿಗೆ ಇಳಿದು, 11 ಶವಗಳನ್ನು ಪತ್ತೆಹಚ್ಚಿರುವ ಸಮಾಜ ಸೇವೆಯನ್ನು ಮಾಡಿದ ಕ್ಷಣಗಳನ್ನು ನಿರ್ಮಾಪಕರೊಂದಿಗೆ ಹಂಚಿಕೊಂಡು, ಸಿನಿಮಾದ ಕಥೆಯಲ್ಲಿ ಅಳವಡಿಸಿಕೊಂಡಿದ್ದೇವೆ. ಆಯ ತಪ್ಪಿ ಜೋಗದ ಗುಂಡಿಯಲ್ಲಿ ರಾತ್ರಿಯೊಂದನ್ನು ಕಳೆದ ಕರಾಳ ಕಥೆಯನ್ನು ಚಿತ್ರಕಥೆಯಲ್ಲಿ ಸೇರಿಸಲಾಗಿದೆ’ ಎಂದು ಜ್ಯೋತಿರಾಜ್ ತಿಳಿಸಿದರು.

‘ನನ್ನ ಸಾಹಸವನ್ನು ವಿಶ್ವವಿಖ್ಯಾತ ಜೋಗ ಜಲಪಾತದ ವಿವಿಧ ಮಜಲುಗಳಲ್ಲಿ ಚಿತ್ರಿಸಿರುವುದು ವೈಯಕ್ತಿಕವಾಗಿ ಕೀರ್ತಿಯನ್ನು ತರುವುದರ ಜೊತೆಗೆ ಜೋಗ ಜಲಪಾತದ ವೈಭವವಿಶ್ವ ಮಟ್ಟದಲ್ಲಿ ಗುರುತಿಸುವಂತಾಗುತ್ತಿರುವುದು ಇನ್ನಷ್ಟು ಸಂತಸ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT