ಭಾನುವಾರ, ಜೂಲೈ 12, 2020
22 °C

ಕೊರೊನಾ: ಮೆಲ್ಬರ್ನ್‌ ಭಾರತೀಯ ಚಿತ್ರೋತ್ಸವ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಆಗಸ್ಟ್‌ ತಿಂಗಳಿನಲ್ಲಿ ಮೆಲ್ಬರ್ನ್‌ನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಭಾರತೀಯ ಚಲನಚಿತ್ರೋತ್ಸವವನ್ನು (ಐಎಫ್‌ಎಫ್‌ಎಂ) ಕೊರೊನಾ ವೈರಸ್‌ ಕಾರಣದಿಂದಾಗಿ ಅಕ್ಟೋಬರ್‌ಗೆ ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

‘ಸಾರ್ವಜನಿಕರ ಆರೋಗ್ಯ ಮಾರ್ಗಸೂಚಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಕ್ಟೋಬರ್‌ 30ರಿಂದ ನವೆಂಬರ್‌ 7ರವರೆಗೆ ಈ ಉತ್ಸವವನ್ನು ಮರು ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ಭಾರತೀಯ ಕಿರುಚಿತ್ರ ಸ್ಪರ್ಧೆ ಹಾಗೂ ಜನಪ್ರಿಯ ನೃತ್ಯ ಸ್ಪರ್ಧೆಗಳು (ಅ.31ರಂದು, ನಿರ್ಬಂಧ ಸಡಿಲಗೊಂಡರೆ ಎಂಬ ನಿಬಂಧನೆಗೆ ಒಳಪಟ್ಟು) ಮಾತ್ರ ನಡೆಯಲಿವೆ. ಬಹುನಿರೀಕ್ಷಿತ ‘ಐಎಫ್‌ಎಫ್‌ಎಂ ಅವಾರ್ಡ್ಸ್’ ಕಾರ್ಯಕ್ರಮವನ್ನು 2021ರವರೆಗೆ ಮುಂದೂಡಲಾಗುವುದು’ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಚಿತ್ರೋತ್ಸವಕ್ಕೆ ‘ಐಎಫ್‌ಎಫ್‌ಎಂ ಫಿಲ್ಮ್‌ ಕ್ಲಬ್‌’ ಎಂಬ ಹೊಸ ಕಾರ್ಯಕ್ರಮವನ್ನು ಸೇರ್ಪಡೆಗೊಳಿಸಲಾಗುವುದು. ಇಲ್ಲಿ ಭಾರತದ ಕೆಲವು ಮುಂಚೂಣಿಯ ಚಿತ್ರ ನಿರ್ಮಾಪಕರು ಪಾಲ್ಗೊಂಡು ತಮ್ಮ ಚಿತ್ರಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸುವರು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು