ಬುಧವಾರ, ಸೆಪ್ಟೆಂಬರ್ 18, 2019
26 °C

‘ಇನ್‌ಶಾ ಅಲ್ಲಾಹ್‌’ನಲ್ಲಿ ಶಾರುಕ್‌

Published:
Updated:
Prajavani

ಸಂಜಯ್‌ ಲೀಲಾ ಬನ್ಸಾಲಿ ಅವರ ‘ಇನ್‌ಶಾ ಅಲ್ಲಾಹ್‌’ ಚಿತ್ರದಿಂದ ಸಲ್ಮಾನ್‌ ಹೊರನಡೆದಿದ್ದಾರೆ. ಈ ಕಾರಣದಿಂದ ಚಿತ್ರ ಅರ್ಧದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಬಿ–ಟೌನ್‌ಲ್ಲಿ ಸುದ್ದಿ ಹರಡಿದೆ. ಇನ್ನೊಂದೆಡೆ ಈ ಚಿತ್ರದ ನಾಯಕನ ಸ್ಥಾನಕ್ಕೆ ಶಾರುಕ್‌ ಖಾನ್‌ ಅವರನ್ನು ಕೇಳಲು ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಯೋಚಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಂಭಾವನೆ ವಿಚಾರದಲ್ಲಿ ಸಂಜಯ್‌ ಲೀಲಾ ಬನ್ಸಾಲಿ ಹಾಗೂ ಸಲ್ಮಾನ್‌ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ಕಾರಣದಿಂದ ಸಲ್ಮಾನ್‌ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಇದೆ. ಮೊದಲು ಚಿತ್ರ ಬಿಡುಗಡೆ ತಡವಾಗಲಿದೆ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಸಲ್ಮಾನ್‌ ಈ ಚಿತ್ರದಿಂದ ಹೊರನಡೆದಿರುವುದನ್ನು ಖಚಿತಪಡಿಸಿದ್ದಾರೆ.

ಸಲ್ಮಾನ್‌ ಈ ಸಿನಿಮಾಕ್ಕಾಗಿ ಬರೋಬ್ಬರಿ ₹100 ಕೋಟಿ ಸಂಭಾವನೆ ಕೇಳಿದ್ದರಂತೆ! ನಟನಿಗಿಂತ ನಿರ್ದೇಶಕ ಮುಖ್ಯ. ಹಾಗಾಗಿ ಸಲ್ಮಾನ್‌ಗೆ ಅಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ ಎನ್ನುವುದು ಸಂಜಯ್ ನಿಲುವು. ಇದೇ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ. ‘ಈ ವರದಿಗಳೆಲ್ಲ ಸುಳ್ಳು. ಹಾಗೇನೂ ಆಗಿಲ್ಲ. ಸಂಜಯ್‌ ಹಾಗೂ ಸಲ್ಮಾನ್‌ ಈಗಲೂ ಒಳ್ಳೆಯ ಸ್ನೇಹಿತರು’  ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

‘ಇನ್‌ಶಾ ಅಲ್ಲಾಹ್‌’ ಚಿತ್ರದಲ್ಲಿ ಸಲ್ಮಾನ್‌ ಹಾಗೂ ಆಲಿಯಾ ಭಟ್‌ ಜೊತೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಈ ಹಿಂದೆ ಆಲಿಯಾ ಹಾಗೂ ಶಾರುಕ್‌ ‘ಡಿಯರ್‌ ಜಿಂದಗಿ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಶಾರುಕ್‌ ಒಪ್ಪಿಕೊಂಡರೆ ಈಗ ಮತ್ತೊಮ್ಮೆ ಈ ಜೋಡಿಯನ್ನು ತೆರೆ ಮೇಲೆ ಒಟ್ಟಿಗೆ ನೋಡಬಹುದು.

Post Comments (+)