ಶನಿವಾರ, ಮಾರ್ಚ್ 6, 2021
28 °C

ಕುತೂಹಲ ಹುಟ್ಟಿಸಿದ ಕಯಟ್ಟಂ ಪೋಸ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯರ್‌ ಈದ್‌ ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ‘ಕಯಟ್ಟಂ’ನ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

‘ಕಯಟ್ಟಂ’ ಎಂದರೆ ‘ಏರುವುದು’ ಎಂದು ಅರ್ಥ. ಈ ಪದಕ್ಕೂ ಅವರು ಹಿಮದ ಮೇಲೆ ಕುಳಿತಿರುವ ದೃಶ್ಯಕ್ಕೂ ಹೋಲಿಸಿದರೆ, ಇದೊಂದು ಹಿಮಶಿಖರ ಏರುವ ಚಾರಣಿಗರ ಕಥೆ ಇದ್ದಂತೆ ಕಾಣುತ್ತಿದೆ. ಆದರೆ, ಸಿನಿಮಾ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.

ಈ ಸಿನಿಮಾದ ಬಹುತೇಕ ಚಿತ್ರೀಕರಣ ಹಿಮಾಚಲಪ್ರದೇಶದ ಸುತ್ತಮುತ್ತ ಸ್ಥಳಗಳಲ್ಲಿ ನಡೆದಿದೆ. ಹಿಮಪ್ರದೇಶದಲ್ಲಿ ಶೂಟಿಂಗ್ ನಡೆಯುವಾಗ ದಿಢೀರನೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಪ್ರವಾಹ ಉಂಟಾಯಿತು. ಈ ಸಮಯದಲ್ಲಿ ಮೂವತ್ತು ಸದಸ್ಯರನ್ನೊಳಗೊಂಡ ಚಿತ್ರತಂಡ ಹಳ್ಳಿಯೊಂದರಲ್ಲಿ ಸಿಕ್ಕಿಕೊಂಡಿತು. ಒಂದು ವಾರ ಅದೇ ಹಳ್ಳಿಯಲ್ಲಿ ನೆಲಸಿತ್ತು.

ಈ ಸಂದರ್ಭದಲ್ಲಿ ಮಂಜು ವಾರಿಯರ್‌ ಅವರ ಸಹೋದರ ಮಧು ವಾರಿಯರ್,‌ ಟಿ.ವಿ ಚಾನೆಲ್‌ಗಳ ಮೂಲಕ ಸಹೋದರಿ ಹಾಗೂ ತಂಡವನ್ನು ಅಪಾಯದಿಂದ ಪಾರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಅವರನ್ನು ಮನಾಲಿಗೆ ಸುರಕ್ಷಿತವಾಗಿ ಕರೆತರಲಾಗಿತ್ತು. 

‘ಕಯಟ್ಟಂ’ ಸಿನಿಮಾಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದವರು ಸನಲ್‌ ಕುಮಾರ್‌ ಶಶಿಧರನ್‌. ಮಂಜು ವಾರಿಯರ್‌ ಚಿತ್ರಕ್ಕೆ ಬಂಡವಾಳ ಹೂಡಿ, ಸಿನಿಮಾ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಇವರೊಂದಿಗೆ ಶಾಜಿ ಮ್ಯಾಥ್ಯೂ ಹಾಗೂ ಅರುಣಾ ಮ್ಯಾಥ್ಯೂ ಕೂಡ ಬಂಡವಾಳ ಹೂಡಿದ್ದಾರೆ. 

ಮಂಜು ವಾರಿಯರ್‌ ‘ಮರಕ್ಕಾರ್ ಅರಬಿ‌ ಕಡಲಿಂಟೆ ಸಿಂಹಮ್’, ‘ಜಾಕ್‌ ಆ್ಯಂಡ್‌ ಜಿಲ್‌’, ‘ಚತುರ್ಮುಗಂ’, ಹಾಗೂ ‘ಲಲಿತಂ ಸುಂದರಂ’ ಚಿತ್ರಗಳಲ್ಲೂ ನಟಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು