ಗುರುವಾರ , ಏಪ್ರಿಲ್ 9, 2020
19 °C

ಆರ್‌ಜಿವಿ ವೆಬ್‌ ಸೀರಿಸ್‌ನಲ್ಲಿ ಇಷಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸೂರ್ಯವಂಶ’ ಚಿತ್ರದಲ್ಲಿ ನಟ ವಿಷ್ಣುವರ್ಧನ್‌ ಜೊತೆಗೆ ಹೆಜ್ಜೆ ಹಾಕಿದ ಬಳಿಕ ಬಾಲಿವುಡ್‌ ನಟಿ ಇಷಾ ಕೊಪ್ಪಿಕರ್‌ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಮತ್ತೆ ಅವರು ಕನ್ನಡ ಸಿನಿಮಾದತ್ತ  ಮರಳಿದ್ದು ಕಳೆದ ವರ್ಷ ತೆರೆಕಂಡ ಶಿವರಾಜ್‌ಕುಮಾರ್‌ ನಟನೆಯ ‘ಕವಚ’ ಚಿತ್ರದ ಮೂಲಕ.

ಪ್ರಸ್ತುತ ಇಷಾ ಅವರು ರಾಮ್‌ಗೋಪಾಲ್‌ ವರ್ಮ ನಿರ್ಮಾಣದ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ, ಇದರ ಮುಖ್ಯಭಾಗದ ಶೂಟಿಂಗ್‌ ಕೂಡ ಪೂರ್ಣಗೊಂಡಿದೆಯಂತೆ. ಅಂದಹಾಗೆ ಇನ್ನೂ ಇದಕ್ಕೆ ಶೀರ್ಷಿಕೆ ಅಂತಿಮಗೊಂಡಿಲ್ಲವಂತೆ.

‘ನಾಲ್ವರು ನಿರ್ದೇಶಕರು ಇದನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಂಡ ಬಳಿಕ ಎಲ್ಲಾ ಕಂತುಗಳನ್ನು ರಾಮ್‌ಗೋಪಾಲ್‌ ವರ್ಮ ಅವರಿಗೆ ಸಲ್ಲಿಸಲಿದ್ದಾರೆ. ಬಳಿಕ ಆರ್‌ಜಿವಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದ ಮೇಲೆ ಗಮನಹರಿಸಲಿದ್ದಾರೆ. ಈ ಸೀರಿಸ್‌ ಮ್ಯಾಜಿಕ್‌ ಮಾಡಲಿದೆ’ ಎನ್ನುವ ಖುಷಿ ಇಷಾ ಅವರದ್ದು. 

‘ಆರ್‌ಜಿವಿ ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾಗಳನ್ನು ಅವಲೋಕಿಸಿದರೆ ಅವರು ಮೇಧಾವಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಆ್ಯಕ್ಷನ್‌ ಕಟ್‌ ಹೇಳಿರುವ ಹಾರರ್‌, ರೊಮ್ಯಾಂಟಿಕ್‌ ಹಾಗೂ ಗ್ಯಾಂಗ್‌ಸ್ಟಾರ್‌ ಸಿನಿಮಾಗಳು ಜನಮನ ಸೆಳೆದಿವೆ’ ಎಂದಿದ್ದಾರೆ ಇಷಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು