ಸೋಮವಾರ, ಮೇ 23, 2022
24 °C

ಈಜುಕೊಳದಲ್ಲಿ ಪೂಲ್ ಬೇಬಿಯಾಗಿ ಕಾಣಿಸಿಕೊಂಡ ಜಾಕ್ವೆಲಿನ್ ಫರ್ನಾಂಡಿಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Jacqueline Fernandez Instagram post

ಬೆಂಗಳೂರು: ಕಪೂರ್ ಸಹೋದರಿಯರು ದುಬೈ ಪ್ರವಾಸ ಮತ್ತು ಹುಟ್ಟುಹಬ್ಬದ ಆಚರಣೆಯಲ್ಲಿ ತೊಡಗಿದ್ದು ಸುದ್ದಿಯಾದ ಬೆನ್ನಲ್ಲೇ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ದುಬೈ ಪ್ರವಾಸಕ್ಕೆ ತೆರಳಿದ್ದಾರೆ.

ಬಾಲಿವುಡ್ ಮಂದಿ ಪ್ರವಾಸ ಹೋದರೆ ಅಭಿಮಾನಿಗಳಿಗಾಗಿಯೇ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಜಾಕ್ವೆಲಿನ್ ಫರ್ನಾಂಡಿಸ್, ದುಬೈನಲ್ಲಿ ಈಜುಕೊಳದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ನೀಲಿ ಬಣ್ಣದ ಸ್ವಿಮ್ ಸೂಟ್‌ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಪೋಸ್ಟ್ ಮಾಡಿರುವ ಫೋಟೊಗೆ, ‘ಪೂಲ್ ಬೇಬಿ’ ಎಂಬ ಅಡಿಬರಹವನ್ನು ಅವರು ನೀಡಿದ್ದಾರೆ.

ಜಾಕ್ವೆಲಿನ್ ಪೋಸ್ಟ್ ಅನ್ನು ಐದು ಲಕ್ಷಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದು, ಕಾಮೆಂಟ್ ಮೂಲಕವೂ ನಟಿಯ ದುಬೈ ವಿಹಾರವನ್ನು ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು