ಗುರುವಾರ , ಮೇ 26, 2022
28 °C

‘ತೋತಾಪುರಿ’ ಹಾಡಿನ ಟೀಸರ್‌: ತೊಟ್ಟು ಬೊಟ್ಟಿನ ಕತೆ ಹೇಳಿದ ಜಗ್ಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನೀರ್‌ದೋಸೆ’ಯ ವಿಜಯ್‌ ಪ್ರಸಾದ್‌–ಜಗ್ಗೇಶ್‌ ಜೋಡಿ ಇದೀಗ ‘ತೋತಾಪುರಿ’ ಸಿನಿಮಾದಲ್ಲಿ ಒಂದಾಗಿದ್ದು, ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ.

ನಿರ್ದೇಶಕ ವಿಜಯ್‌ ಪ್ರಸಾದ್‌ ಅವರು ಹಾಸ್ಯ ಪ್ರಧಾನ 'ತೋತಾಪುರಿ' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಹಾಡಿನ ಟೀಸರ್​ ಬಿಡುಗಡೆ ಆಗಿದೆ. 

ಇದೀಗ ಚಿತ್ರ ತಂಡ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, 'ತೋತಾಪುರಿ' ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡುತ್ತಿದೆ. ಕನ್ನಡ ಸೇರಿದಂತೆ ಹಿಂದಿ,ತೆಲುಗು, ತಮಿಳು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. 

ಹಾಡಿನ ಟೀಸರ್‌ನ ಆರಂಭದಲ್ಲಿಯೇ ’ತೊಟ್ಟು ಬೊಟ್ಟಿನ ಮೊದಲ ನೋಟ, ಮೊದಲ ಮಾತು’ ಅಂತ ನಿರ್ದೇಶಕರು ಹೇಳಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿದೆ. ಬಾಲಿವುಡ್  ಹಾಡೊಂದರ ಸಾಲುಗಳ ಝಲಕ್ ಹಾಡಿನ ಟೀಸರ್‌ನಲ್ಲಿರುವುದು ವಿಶೇಷ.

ಈ ಸಿನಿಮಾದ ಹಾಡಿಗೆ ಅನೂಪ್‌ ಸೀಳನ್‌ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಎಂದು ಚಿತ್ರತಂಡ ಹೇಳಿದೆ. ಆದರೆ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಿಲ್ಲ. 

ಇದನ್ನೂ ಓದಿ: ಯುವರಾಜ ನಿಖಿಲ್‌ ಈಗ ಯದುವೀರ!

ಎರಡು ಭಾಗಗಳಲ್ಲಿ ಈ ಚಿತ್ರವು ತೆರೆಗೆ ಬರಲಿದ್ದು, ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ.  ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ಡಾಲಿ ಧನಂಜಯ್, ವೀಣಾ ಸುಂದರ್‌ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯೋಗಿ - ಅದಿತಿ ಪ್ರಭುದೇವ ನಟನೆಯ ಒಂಬತ್ತನೇ ದಿಕ್ಕು 28ರಂದು ಬಿಡುಗಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು