ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸ್ ಆಫೀಸ್‌ನಲ್ಲಿ ಜೈಲರ್ ಮಿಂಚು: ನಟ ರಜನಿಕಾಂತ್‌ಗೆ ₹ 100 ಕೋಟಿ ಉಡುಗೊರೆ?

ಚಿತ್ರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಕಡೆಯಿಂದ ಉಡುಗೊರೆ
Published 1 ಸೆಪ್ಟೆಂಬರ್ 2023, 9:51 IST
Last Updated 1 ಸೆಪ್ಟೆಂಬರ್ 2023, 9:51 IST
ಅಕ್ಷರ ಗಾತ್ರ

ಬೆಂಗಳೂರು: ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಆ ಚಿತ್ರತಂಡದ ಸಂಭ್ರಮ ಹೆಚ್ಚಾಗಿದೆ.

ಜೈಲರ್ ಸಿನಿಮಾವನ್ನು ನಿರ್ಮಿಸಿರುವ ಸನ್‌ ಪಿಕ್ಚರ್ಸ್ ಅವರು ರಜನಿಕಾಂತ್‌ಗೆ ₹ 100 ಕೋಟಿ ಉಡುಗೊರೆ ರೂಪದ ಚೆಕ್ ನೀಡಿದ್ದಾರೆ ಎನ್ನಲಾಗಿದೆ.

ಉಡುಗೊರೆ ನೀಡಿರುವ ವಿಷಯವನ್ನು ‘ಸನ್‌‘ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಕಲಾನಿಧಿ ಮಾರನ್ ಅವರಿಂದ ಉಡುಗೊರೆಯನ್ನು ಸ್ವೀಕರಿಸಿರುವ ಚಿತ್ರ ಗಮನ ಸೆಳೆದಿದೆ.

ಕೆಲವು ತಮಿಳು ಸಿನಿಮಾ ತಜ್ಞರ ಪ್ರಕಾರ ಸನ್‌ ಪಿಕ್ಚರ್ಸ್ ಜೈಲರ್ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ರಜನಿಕಾಂತ್ ಅವರಿಗೆ ₹ 100 ಕೋಟಿ ಉಡುಗೊರೆ ನೀಡಿದೆ ಎಂದು ತಿಳಿದು ಬಂದಿದೆ.

ಸನ್‌ ಪಿಕ್ಚರ್ಸ್ ಕಡೆಯಿಂದ ರಜನಿಕಾಂತ್ ಅವರಿಗೆ ದುಬಾರಿ ಬೆಲೆಯ ಬಿಎಂಡಬ್ಲೂ ಕಾರನ್ನು ಉಡುಗೊರೆ ಸಹ ನೀಡಲಾಗಿದೆ. ಇದರ ವಿಡಿಯೊವನ್ನು ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಆದರೆ. ₹ 100 ಕೋಟಿ ಉಡುಗೊರೆ ಬಗ್ಗೆ ರಜನಿಕಾಂತ್ ಅವರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ, ರಜನಿಕಾಂತ್, ಶಿವರಾಜ್​ಕುಮಾರ್, ಮೋಹನ್​ಲಾಲ್ ಮುಖ್ಯಭೂಮಿಕೆಯಲ್ಲಿರುವ ‘ಜೈಲರ್’ ಚಿತ್ರ ಆಗಸ್ಟ್ 10ರಂದು ಜಗತ್ತಿನಾದ್ಯಂತ ತೆರೆ ಕಂಡಿತ್ತು.

ಅಧಿಕೃತ ಮಾಹಿತಿ ಪ್ರಕಾರ ಜೈಲರ್ ಸಿನಿಮಾ ಇದುವರೆಗೆ ₹ 600 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಸನ್ ಪಿಕ್ಚರ್ಸ್ ತಮ್ಮ ನಿರ್ಮಾಣದ ಇನ್ನೊಂದು ಚಿತ್ರದಲ್ಲಿ ಅಭಿನಯಿಸುವಂತೆ ರಜನಿಕಾಂತ್ ಅವರನ್ನು ಕೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT