ಶನಿವಾರ, ಮೇ 28, 2022
31 °C

ಡಿಜಿಟಲ್‌ ವೇದಿಕೆಗೆ ಜಾಹ್ನವಿ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಾಂತ ನಟ ನಟಿಯರು ಕೂಡು ಡಿಜಿಟಲ್‌ ವೇದಿಕೆಯ ಕಡೆ ಮುಖ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲೂ ಈ ಸರಣಿ ಆರಂಭವಾಗಿದೆ. ಕಿರುಚಿತ್ರಗಳ ಮೂಲಕ ಯುವ ಜನಾಂಗವನ್ನು ಸೆಳೆಯುವ ಹಾದಿಯಲ್ಲಿ ಈಗ ಜಾಹ್ನವಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಜೋಯಾ ಅಖ್ತರ್‌ ಈಗಾಗಲೇ ಡಿಜಿಟಲ್‌ ಮಾಧ್ಯಮದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ‘ಲಸ್ಟ್‌ ಸ್ಟೋರಿಸ್‌’ ಬಾಲಿವುಡ್‌ ಪ್ರಿಯರಿಗೆ ರಸದೌತಣ ನೀಡಿತ್ತು. ಈ ಕ್ರೇಜ್‌ ಹಾಗೇ ಮುಂದುವರಿಸುವ ಉದ್ದೇಶದಿಂದ ಅವರು ದೊಡ್ಡ ಪ್ರಯತ್ನವೊಂದಕ್ಕೆ ಕೈ ಹಾಕಲಿದ್ದಾರೆ ಎಂಬ ಸುದ್ದಿ ಸಾಕಷ್ಟು ದಿನದಿಂದ ಹರಿದಾಡುತ್ತಿತ್ತು.

‘ಧಡಕ್‌’ ಸಿನಿಮಾದಲ್ಲಿ ಅಭಿಮಾನಿಗಳ ಹೃದಯ ಗೆದ್ದ ಜಾಹ್ನವಿ ಅವರ ನಾಯಕತ್ವದಲ್ಲಿ ‘ಗೋಸ್ಟ್‌ ಸ್ಟೋರಿಸ್‌’ ಮಾಡಲು ಜೋಯಾ ಅಖ್ತರ್‌ ಸಿದ್ಧತೆ ನಡೆಸಿದ್ದಾರೆ. ಭಯಾನಕ ಎನಿಸುವಂತಹ ಹಾರರ್‌ ಹಾಗೂ ಥ್ರಿಲ್ಲರ್‌ ದೃಶ್ಯಗಳನ್ನು ಕಟ್ಟಿಕೊಡಲಿದ್ದಾರೆ. ಸ್ಕ್ರಿಪ್ಟ್‌ ಈಗಾಗಲೇ ಸಿದ್ಧಗೊಂಡಿದೆ. 30 ನಿಮಿಷದ ಸಿನಿಮಾ ಇದಾಗಲಿದೆ. ಒಟ್ಟು 10 ದಿನದಲ್ಲಿ ಶೂಟಿಂಗ್ ಮುಗಿಸಲು ಸಿನಿಮಾ ತಂಡ ಸಜ್ಜುಗೊಂಡಿದೆ.

ತಕ್ತ್‌, ಕಾರ್ಗಿಲ್‌ ಗರ್ಲ್‌, ರೂಹಿ ಅಫ್ಜಾ ಸಿನಿಮಾಗಳಲ್ಲಿ ನಟಿಸುತ್ತಿರುವ ಜಾಹ್ನವಿ ಸದ್ಯಕ್ಕೆ ಬ್ಯುಸಿ ನಟಿ. ಹಾಗಾಗಿ ಅವರ ಡೇಟ್ಸ್‌ಗೆ ತಕ್ಕಂತೆ ಶೂಟಿಂಗ್ ಯೋಜನೆ ರೂಪಿಸಲಾಗಿದೆಯಂತೆ.

ಜೋಯಾ ಅವರೊಂದಿಗೆ ಕರಣ್‌ ಜೋಹರ್‌, ದಿವಾಕರ್ ಬ್ಯಾನರ್ಜಿ, ಅನುರಾಗ್‌ ಕಶ್ಯಪ್‌ ಈ ಸಿನಿಮಾದ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ‘ಬಾಂಬೆ ಟಾಕೀಸ್‌’, ಹಾಗೂ ‘ಲಸ್ಟ್‌ ಸ್ಟೋರಿಸ್‌’ನಲ್ಲೂ ಈ ನಾಲ್ವರೂ ಒಟ್ಟಿಗೆ ಕೆಲಸ ಮಾಡಿದ್ದರು.

ಜಾಹ್ನವಿ ಸದ್ಯ‘ರೂಹಿ ಅಫ್ಜಾ’ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ರಾಜ್‌ಕುಮಾರ್‌ ರಾವ್‌ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್‌ 20ರಂದು ಬಿಡುಗಡೆಗೆ ಸಜ್ಜಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು