ಜನುಮದ ಸ್ನೇಹಿತರು ಶೀಘ್ರ ತೆರೆಗೆ

7

ಜನುಮದ ಸ್ನೇಹಿತರು ಶೀಘ್ರ ತೆರೆಗೆ

Published:
Updated:
Deccan Herald

ಪವಿತ್ರವಾದ ಸ್ನೇಹಕ್ಕೆ ಜಾತಿ, ಮತಗಳ ತಾರತಮ್ಯವಿಲ್ಲ ಎಂಬ ಅಂಶ ಇಟ್ಟುಕೊಂಡು ‘ಜನುಮದ ಸ್ನೇಹಿತರು’ ಚಿತ್ರವೊಂದು ನಿರ್ಮಾಣವಾಗಿ ತೆರೆಗೆ ಬರಲು ಸಜ್ಜಾಗಿದೆ.

ಚಿಕ್ಕ ವಯಸ್ಸಿನಿಂದಲೇ ಸಿನಿಮಾ ಕನಸನ್ನು ಹೊತ್ತಿದ್ದ ಶೈಕ್ ಮುಕ್ತಿಯಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಬಡತನದಿಂದಲ್ಲೇ ಹುಟ್ಟಿ ಬೆಳೆದ ಅವರಿಗೆ ಕನ್ನಡ ಭಾಷೆಯ ಮೇಲೆ ಇನ್ನಿಲ್ಲದ ಪ್ರೀತಿ ಅಭಿಮಾನ. ಹಾಗಾಗಿ ಇಂಡಿಯನ್ ಫಿಲಂ ಇಂಡಸ್ರ್ಟಿ ಎಂಬ ಬ್ಯಾನರ್ ಸ್ಥಾಪಿಸಿ ಅದರ ಮೂಲಕ ಚಿತ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹಾಡೊಂದನ್ನು ಬರೆದಿರುವ ಅವರು ಪ್ರಮುಖ ಪಾತ್ರವೊಂದರಲ್ಲೂ ಕಾಣಿಸಿಕೊಂಡಿದ್ದಾರೆ.

ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಒಂದಷ್ಟು ಘಟನೆಗಳ ಬಗ್ಗೆ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಕೂಡ ಸಿದ್ಧವಾಗಿದ್ದು, ಈ ತಿಂಗಳ ಅಂತ್ಯದೊಳಗೆ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಫ್ಯಾಕ್ಟರಿ ಹಾಗೂ ಕೆಲಸಗಾರರ ಸುತ್ತ ಮುತ್ತ ನಡೆಯುವ ಕಥಾಹಂದರವಿದೆ.

ಪರುಷುರಾಮ್ ನಾವಳ್ಳಿ ನಿರ್ದೇಶನ ಈ ಚಿತ್ರಕ್ಕಿದೆ. ಎ. ರಾಜ್ ಕುಮಾರ್ ಸಂಗೀತ, ಕೃಷ್ಣ ಸಾರಥಿ ಛಾಯಾಗ್ರಹಣ, ಶ್ರೀಧರ್ ಶೆಟ್ಟಿ ಚಿತ್ರಕಥೆ, ಸಂಭಾಷಣೆ ಮತ್ತು ಸಹನಿರ್ದೇಶನವಿದ್ದು, ಜಗ್ಗು ನೃತ್ಯ, ಸುಪ್ರಿತ್‍ ಶಂಕರ್ ಸಂಕಲನ ಹೊತ್ತಿದ್ದಾರೆ. ಶೈಕ್ ಸದ್ದಾಂ ಭಾಷ ಕಾರ್ಯಕಾರಿ ನಿರ್ಮಾಪಕರಾಗಿದ್ದು, ರೋಹಿತ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಅಂಗಾರಿಕ, ಮೂಗು ಸುರೇಶ್, ರವಿ, ಹರೀಶ್ ದೇವರಾಜ್ ಹಾಗೂ ಮುಂತಾದವರ ತಾರಬಳಗವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !