ಅನುಪಮಾ ಜತೆ ಜಸ್‌ಪ್ರೀತ್‌ ಡೇಟಿಂಗ್‌?

ಭಾನುವಾರ, ಜೂಲೈ 21, 2019
27 °C

ಅನುಪಮಾ ಜತೆ ಜಸ್‌ಪ್ರೀತ್‌ ಡೇಟಿಂಗ್‌?

Published:
Updated:

ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ನಟಿ ಅನುಪಮಾ ‍ಪರಮೇಶ್ವರನ್‌ ಜೊತೆ ಡೇಟಿಂಗ್‌ನಲ್ಲಿದ್ದಾರೆ! ಇಂಥದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಟ್ವಿಟ್ಟರ್‌ನಲ್ಲಿ ಅನುಪಮಾ ಪರಮೇಶ್ವರನ್‌ ಅವರ ಟ್ವೀಟ್‌, ಫೋಟೊಗಳನ್ನು ಬೂಮ್ರಾ ಲೈಕ್‌ ಮಾಡಿದ್ದಾರೆ. ಕೆಲ ಪೋಸ್ಟ್‌ಗಳನ್ನು ಶೇರ್‌ ಮಾಡಿದ್ದಾರೆ. ಹೀಗಾಗಿ ಇವರಿಬ್ಬರು ಪ್ರೀತಿ ಲೋಕದಲ್ಲಿದ್ದಾರೆ ಎಂಬಂಥ ಸುದ್ದಿಗಳು ಹರಿದಾಡುತ್ತಿವೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಅನುಪಮಾ, ‘ನಾವಿಬ್ಬರು ಸ್ನೇಹಿತರಷ್ಟೇ. ನಾನು ಜಸ್‌ಪ್ರೀತ್‌ ಜೊತೆ ಡೇಟಿಂಗ್‌ ನಡೆಸುತ್ತಿಲ್ಲ. ಹಾಗೆಯೇ ಇಂತಹ ಲಿಂಕ್‌ಗಳು ಸಿನಿಮಾ ಹಾಗೂ ಕ್ರಿಕೆಟ್‌ ರಂಗದಲ್ಲಿ ಸಾಮಾನ್ಯ’ ಎಂದು ತಳ್ಳಿ ಹಾಕಿದ್ದಾರೆ. 

ಈ ಹಿಂದೆ ಬೂಮ್ರಾ, ರಾಶಿಖನ್ನಾ ಜೊತೆಗಿನ ಡೇಟಿಂಗ್‌ ಸುದ್ದಿ ಹರಿದಾಡಿತ್ತು. ಆಗ ಸಂದರ್ಶನವೊಂದರಲ್ಲಿ ರಾಶಿ ‘ನನಗೆ ಜಸ್‌ಪ್ರೀತ್‌ ವೈಯಕ್ತಿಕವಾಗಿ ಗೊತ್ತಿಲ್ಲ. ನಾನು ಇಲ್ಲಿಯತನಕ ಅವರನ್ನು ಭೇಟಿ ಕೂಡ ಮಾಡಿಲ್ಲ. ಅವರು ಕ್ರಿಕೆಟಿಗ ಎಂಬುದಷ್ಟೇ ಗೊತ್ತು’ ಎಂದು ಹೇಳಿದ್ದರು. 

Post Comments (+)