ಭಾನುವಾರ, ಆಗಸ್ಟ್ 25, 2019
23 °C

‘ಜೆರ್ಸಿ’ ಸಿನಿಮಾಕ್ಕೆ ಅಮಲಾ ನಾಯಕಿ

Published:
Updated:
Prajavani

ಟಾಲಿವುಡ್‌ನಲ್ಲಿ ನಾನಿ ಹಾಗೂ ಶ್ರದ್ಧಾ ಶ್ರೀನಾಥ್‌ ಅಭಿನಯದ ‘ಜೆರ್ಸಿ’ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಈಗ ಈ ಸಿನಿಮಾ ತಮಿಳಿಗೆ ರಿಮೇಕ್‌ ಆಗುತ್ತಿದ್ದು, ನಾಯಕಿಯಾಗಿ ಅಮಲಾ ಪಾಲ್‌ ಆಯ್ಕೆಯಾಗಿದ್ದಾರೆ. 

ಸದ್ಯ ನಾಲ್ಕೈದು ಸಿನಿಮಾಗಳಲ್ಲಿ ಅಮಲಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ನಟಿಸಿರುವ ‘ಅಡೈ’ ಚಿತ್ರ ಬೇರೆ ಬೇರೆ ಕಾರಣಗಳಿಂದ ಸುದ್ದಿಯಾಗಿತ್ತು. ಈಗ ಹೊಸ ಚಿತ್ರಕ್ಕೆ ಅವರು ಸಹಿ ಹಾಕಿದ್ದು, ಇದು ‘ಜೆರ್ಸಿ’ ಸಿನಿಮಾದ ರಿಮೇಕ್‌. ಮೂಲ ಸಿನಿಮಾದಲ್ಲಿ ನಟಿ ಶ್ರದ್ಧಾ ಶ್ರೀನಾಥ್‌ ನಿರ್ವಹಿಸಿದ ಪಾತ್ರವನ್ನು ಅಮಲಾ ಮಾಡಲಿದ್ದಾರೆ. 

ತಮಿಳು ರಿಮೇಕ್‌ ಚಿತ್ರವನ್ನು ನೆಲ್ಸನ್‌ ವೆಂಕಟೇಶನ್‌ ನಿರ್ದೇಶಿಸಲಿದ್ದಾರೆ. ವಿಷ್ಣು ವಿಶಾಲ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ಸದ್ಯದಲ್ಲೇ ಈ ಚಿತ್ರದ ಶೂಟಿಂಗ್‌ ಆರಂಭವಾಗಲಿದ್ದು, ಈಗ ಬೇರೆ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯುತ್ತಿದೆ. ಈ ಸಿನಿಮವನ್ನು ರಾನಾ ದಗ್ಗುಬಾಟಿ ನಿರ್ಮಾಣ ಮಾಡುತ್ತಿದ್ದಾರೆ. 

Post Comments (+)