ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

35ನೇ ವರ್ಷಕ್ಕೆ ಕ್ಯಾನ್ಸರ್‌ನಿಂದ ಇಹಲೋಕ ತ್ಯಜಿಸಿದ ನಟ, ಗಾಯಕ ಜಾನಿ

Published 10 ನವೆಂಬರ್ 2023, 9:27 IST
Last Updated 10 ನವೆಂಬರ್ 2023, 9:35 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾದ ನಟ ಹಾಗೂ ಗಾಯಕ ಜಾನಿ ರಪೋ ಕ್ಯಾನ್ಸರ್‌ನಿಂದ ತಮ್ಮ 35ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.

2017ರಿಂದಲೂ ಮೆದುಳು ಕ್ಯಾನ್ಸರ್‌ನಿಂದ ಜಾನಿ ರಪೋ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್‌ ವಿರುದ್ಧ ಹೋರಾಡುವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಸಕ್ರಿಯರಾಗಿದ್ದರು. 

ಶುಕ್ರವಾರ ಜಾನಿ ನಿಧನರಾದರು ಎಂದು ಅವರ ಕುಟುಂಬದವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಸಿನಿಮಾಗಳು, ಎಕ್ಸ್‌ ಪ್ಯಾಕ್ಟರ್‌ ಸೇರಿದಂತೆ ವಿವಿಧ ವೆಬ್‌ ಸರಣಿಗಳಲ್ಲಿ ಅವರು ನಟಿಸಿದ್ದರು. ಹಲವಾರು ಆಲ್ಬಂಗಳಲ್ಲಿ ಅವರು ಹಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT