ಮಂಗಳವಾರ, ಸೆಪ್ಟೆಂಬರ್ 29, 2020
22 °C

ಮತ್ತೆ ತೆರೆ ಮೇಲೆ ಮೋಡಿ ಮಾಡಲಿದ್ದಾರಾ ದಳಪತಿ ವಿಜಯ್‌–ಕಾಜಲ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೋಹಕ ಚೆಲುವೆ ಕಾಜಲ್ ಅಗರ್‌ವಾಲ್ 2006ರಿಂದ ಸಿನಿಮಾ ಕ್ಷೇತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮಿಳು ಹಾಗೂ ತೆಲುಗಿನ ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಕಾಜಲ್‌. ಅಲ್ಲದೇ ಬಾಲಿವುಡ್‌ನ ಅಕ್ಷಯ್ ಕುಮಾರ್ ಹಾಗೂ ಅಜೇಯ್ ದೇವಗನ್ ಜೊತೆ ಕೂಡ ನಟಿಸಿದ್ದಾರೆ‌. 35ನೇ ವಯಸ್ಸಿನಲ್ಲೂ ಈಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರ ಕೈಯಲ್ಲಿ ಈಗ ಅನೇಕ ಸಿನಿಮಾಗಳಿವೆ.

ಸದ್ಯದ ಸುದ್ದಿಯ ಪ್ರಕಾರ ಖ್ಯಾತ ನಿರ್ದೇಶಕ ಮುರುಗದಾಸ್ ಸಿನಿಮಾದಲ್ಲಿ ಮತ್ತೆ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ ಕಾಜಲ್‌. ಮುರುಗದಾಸ್‌, ವಿಜಯ್‌ ಹಾಗೂ ಕಾಜಲ್ ಈ ಮೂವರ ಕಾಂಬಿನೇಷನ್‌ನಲ್ಲಿ ‘ತುಪಾಕಿ’ ಸಿನಿಮಾ ಮೂಡಿಬಂದಿತ್ತು. ಅಲ್ಲದೇ ಅದು ಕಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾವಾಗಿತ್ತು. ಈಗ ಮತ್ತೆ ನಿರ್ದೇಶಕ ಹಾಗೂ ನಾಯಕ ಒಂದಾಗಿದ್ದು ಇವರ ಪ್ರಾಜೆಕ್ಟ್‌ಗೆ ಕಾಜಲ್‌ ನಾಯಕಿ ಎಂಬ ಮಾತು ಕಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ‘ಜಿಲ್ಲಾ’ ಹಾಗೂ ‘ಮರ್ಸೈಲ್’ ಸಿನಿಮಾಗಳಲ್ಲೂ ವಿಜಯ್ ಹಾಗೂ ಕಾಜಲ್ ಒಂದಾಗಿ ನಟಿಸಿದ್ದರು. ಮುರುಗದಾಸ್ ಮುಂದಿನ ಸಿನಿಮಾದಲ್ಲಿ ಈ ಜೋಡಿ ಮತ್ತೆ ರೊಮ್ಯಾನ್ಸ್ ಮಾಡಲಿವೆ ಎನ್ನಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಕಾಜಲ್ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ.

ಕಾಜಲ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಹಾಗೂ ಶಂಕರ್ ನಿರ್ದೇಶನದ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ವಿಷ್ಣು ಮಂಚು ಅಭಿನಯದ ‘ಮೋಸಗಲ್ಲು’ ಹಾಗೂ ದುಲ್ಕರ್ ಸಲ್ಮಾನ್ ನಟನೆಯ ‘ಹೇ ಸಿನಾಮಿಕಾ’ದಲ್ಲೂ ತೆರೆ ಹಂಚಿಕೊಳ್ಳಲಿದ್ದಾರೆ ಈ ಬೆಂಗಾಲಿ ಬೆಡಗಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು