ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತಾರದಲ್ಲಿ ದೈವ ತಾಯಿಯಂತೆ ವರ್ತಿಸುವುದ ಕಂಡೆ: ರಿಷಭ್‌ಗೆ ಕಮಲ್ ಹಾಸನ್ ಮೆಚ್ಚುಗೆ

Last Updated 16 ಜನವರಿ 2023, 13:47 IST
ಅಕ್ಷರ ಗಾತ್ರ

ಬೆಂಗಳೂರು: ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರ ಕಾಂತಾರ ಸಿನಿಮಾ ಅದ್ಭುತ ಯಶಸ್ಸು ಕಂಡು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.

ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಕಾಂತಾರ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅದೇ ರೀತಿ ನಟ ಕಮಲ್ ಹಾಸನ್ ಅವರು ಕೂಡ ರಿಷಭ್ ಶೆಟ್ಟಿ ಅವರಿಗೆ ಪತ್ರ ಬರೆದು ಕಾಂತಾರ ಸಿನಿಮಾ ಬಗ್ಗೆ ಪ್ರಶಂಷೆ ನೀಡಿದ್ದಾರೆ.

ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು ರಿಷಭ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

‘ನಾನು ಸಹಜವಾಗಿ ದೇವರನ್ನು ನಂಬುವುದಿಲ್ಲ. ಆದರೆ, ಅದರ ಅವಶ್ಯಕತೆಯನ್ನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ದೇವರು ತಾಯಿಯಂತೆ ವರ್ತಿಸುವುದನ್ನು ಕಂಡೆ. ಇದು ದ್ರಾವಿಡ ಸಂಸ್ಕೃತಿಯ ಪ್ರತೀಕ, ಅದ್ಭುತ’ ಎಂದು ಬಣ್ಣಿಸಿದ್ದಾರೆ.

‘ಒಂದು ಸುಂದರ ಕಲಾಕೃತಿಯು ಶ್ರೇಷ್ಠತೆಯ ಸ್ಥಾನಮಾನವನ್ನು ಹೇಗೆ ಹೊಂದುತ್ತದೆ ಎಂಬುದು ಕಾಂತಾರ ಸಿನಿಮಾದಿಂದ ಸಾಬೀತಾಗಿದೆ. ಸಿನಿಮಾದಲ್ಲಿ ಕ್ಲಾಸಿಕ್ ಛಾಯೆ ದಟ್ಟವಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠತೆಯನ್ನು ನೀವು ಮುಂದೆ ಕೊಂಡೊಯ್ಯುತ್ತಿರಿ’ ಎಂದು ಕಮಲ್ ಹೇಳಿದ್ದಾರೆ.

‘ಅರ್ಹ ವ್ಯಕ್ತಿಗಳಿಗೆ ಅದೃಷ್ಠ ಎಂಬುದೇ ಇಲ್ಲ. ನಿಮ್ಮ ಮುಂದಿನ ಸಿನಿಮಾ ನಿಮ್ಮದೇ ಕಾಂತಾರ ಸಿನಿಮಾದ ದಾಖಲೆಯನ್ನು ಮುರಿಯುವಂತಾಗಲಿ’ ಎಂದು ಶುಭಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT