ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಖಿ ಸಾವಂತ್ ಜೊತೆ ಮದುವೆ ಆಗಿರುವುದನ್ನು ಖಚಿತಪಡಿಸಿದ ಮೈಸೂರು ಮೂಲದ ಉದ್ಯಮಿ

rakhi sawant
Last Updated 17 ಜನವರಿ 2023, 5:21 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಮದುವೆಯಾಗಿರುವುದಾಗಿ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿ ಖಚಿತಪಡಿಸಿದ್ದಾರೆ.

ಈ ಕುರಿತಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಅಂತಿಮವಾಗಿ ನಾನು ಇಲ್ಲೊಂದು ಘೋಷಣೆ ಮಾಡುತ್ತಿದ್ದೇನೆ. ನಾನು ನಿನ್ನನ್ನು ಮದುವೆಯಾಗಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ರಾಖಿ. ಕೆಲವು ವಿಷಯಗಳನ್ನು ನಿಭಾಯಿಸಬೇಕಿದ್ದರಿಂದ ಮೌನವಾಗಿದ್ದೆ. ‘ನಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಶುಭಕಾಮನೆಗಳು ರಾಖಿ(ಪಪ್ಪುಡಿ)’ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಜೊತೆಗೆ ಮದುವೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಆದಿಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಖಿ ಸಾವಂತ್, ನಿಮ್ಮ ಪ್ರೀತಿಗೆ ಧನ್ಯವಾದಗಳು ಜಾನ್(ಕೈಮುಗಿಯುತ್ತಿರುವ ಎಮೊಜಿ) ಎಂದು ಹೇಳಿದ್ದಾರೆ.

ಈ ಹಿಂದೆ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆದಿಲ್ ಖಾನ್, ತಮ್ಮಿಬ್ಬರ ನಡುವಿನ ಸ್ನೇಹದ ಬಗ್ಗೆ ಹೇಳಿಕೊಂಡಿದ್ದರು. ಮನೆಯವರಿಗೂ ಅದು ಗೊತ್ತಿದೆ. ಅದಕ್ಕೆ ಮದುವೆಯ ಅರ್ಥ ನೀಡಲು ಅವರ ಒಪ್ಪಿಗೆಗಾಗಿ ಕಾಯುತ್ತಿರುವ ಎಂದಿದ್ದರು.

ಈ ನಡುವೆ, ಮದುವೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡಿದ್ದವು. ಇದೀಗ, ಆದಿಲ್ ಮದುವೆಯನ್ನು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT