ಮೌನವ್ರತದ ಮೊರೆ ಹೋಗಲಿರುವ ಕಂಗನಾ

ಗುರುವಾರ , ಮಾರ್ಚ್ 21, 2019
27 °C

ಮೌನವ್ರತದ ಮೊರೆ ಹೋಗಲಿರುವ ಕಂಗನಾ

Published:
Updated:
Prajavani

‘ಮಣಿಕರ್ಣಿಕಾ’ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ನಟಿ ಕಂಗನಾ, ತಮ್ಮ ಹುಟ್ಟುಹಬ್ಬಕ್ಕಾಗಿ 10 ದಿನಗಳ ಮೌನವ್ರತದ ಮೊರೆ ಹೋಗಲಿದ್ದಾರಂತೆ. ಮಾರ್ಚ್‌ 23ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಕಂಗನಾ, ಕೊಯಮತ್ತೂರಿನ ಆರೋಗ್ಯ ಕೇಂದ್ರವೊಂದರಲ್ಲಿ ದಾಖಲಾಗಿ 10 ದಿನಗಳ ಕಾಲ ಮೌನವಾಗಿ ಯೋಗದಲ್ಲಿ ತೊಡಗಿಕೊಳ್ಳಲಿದ್ದಾರಂತೆ.

ಯೋಗ ಶಿಬಿರದ ಬಳಿಕ ತನ್ನೂರು ಮನಾಲಿಗೆ ತೆರಳಲಿರುವ ಕಂಗನಾ, ಅಲ್ಲಿ ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ತಮ್ಮ ಜನ್ಮದಿನದಂದು ಕಂಗನಾ, ತಮ್ಮ ಸ್ವಂತ ಮನೆಯ ಸುತ್ತ 31 ಸಸಿಗಳನ್ನು ನೆಟ್ಟಿದ್ದರು.

‘ನಾನು 16–17 ವರ್ಷದವಳಿದ್ದಾಗಲೇ ಯೋಗಾಭ್ಯಾಸ ಮಡುತ್ತಿದ್ದೆ. ಕೊಯಮತ್ತೂರಿನಲ್ಲಿ ಯೋಗದ ಅಡ್ವಾನ್ಸ್‌ ಕೋರ್ಸ್ ಮಾಡಲು ಹೋಗುತ್ತಿದ್ದೇನೆ. ಈ ಬಾರಿ ಹುಟ್ಟುಹಬ್ಬದ ಆಸುಪಾಸಿನ ದಿನಗಳಲ್ಲಿ ಹೋಗುತ್ತಿದ್ದೇನಷ್ಟೇ. ಹತ್ತು ದಿನಗಳ ಕಾಲ ಮೌನವಾಗಿರುವುದು ದೊಡ್ಡ ಬದ್ಧತೆ. ನನ್ನ ಹುಟ್ಟುಹಬ್ಬಕ್ಕೆ ಮೌನದ ಉಡುಗೊರೆಯನ್ನು ನಾನೇ ಕೊಟ್ಟುಕೊಳ್ಳುತ್ತಿರುವೆ’ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !