ಮನಾಲಿ: ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಪ್ರೇಮಿಗಳ ದಿನದಂದು ಮನಾಲಿಯಲ್ಲಿ ‘ದಿ ಮೌಂಟೇನ್ ಸ್ಟೋರಿ’ ಎಂಬ ಕೆಫೆಯನ್ನು ಪ್ರಾರಂಭಿಸಿದ್ದಾರೆ.

‘ದಿ ಮೌಂಟೇನ್ ಸ್ಟೋರಿ’ ಕೆಫೆ ಬಾಲ್ಯದಿಂದಲೂ ಪೋಷಿಸಿದ ಕನಸಾಗಿದೆ. ಈಗ ಅದು ಹಿಮಾಲಯದ ಹೃದಯದಲ್ಲಿ ಅರಳಿದೆ. ಈ ಕೆಫೆ ಭೋಜನ ಮಾಡುವ ಸ್ಥಳಕ್ಕಿಂತ ಹೆಚ್ಚು. ಇದೊಂದು ಪ್ರೇಮಕಥೆ. ನನ್ನ ತಾಯಿಯ ಅಡುಗೆ ಮನೆಯ ಸುವಾಸನೆ ಮತ್ತು ಇಲ್ಲಿರುವ ಪರ್ವತಗಳ ಪ್ರಶಾಂತ ಸೌಂದರ್ಯಕ್ಕೆ ನೀಡುವ ಗೌರವವಾಗಿದೆ ಎಂದು ಕಂಗನಾ ಹೇಳಿದ್ದಾರೆ.

ಕೆಫೆ ಮೆನುವಿನಲ್ಲಿರುವ ಪ್ರತಿಯೊಂದು ಖಾದ್ಯವನ್ನು ತಾಜಾ, ಸ್ಥಳೀಯವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಜಾಗರೂಕತೆಯಿಂದ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಫೆಯಲ್ಲಿ ಪಹಾಡಿ ಸಸ್ಯಾಹಾರಿ ಥಾಲಿಯನ್ನು ₹680ಕ್ಕೆ ಮತ್ತು ಪಹಾಡಿ ಮಾಂಸಾಹಾರಿ ಥಾಲಿಯನ್ನು ₹850ಕ್ಕೆ ನೀಡಲಾಗುತ್ತದೆ. ಜೊತೆಗೆ ಸಿದ್ದು, ಸ್ಥಳೀಯ ಹಿಮಾಚಲ ಖಾದ್ಯ, ಮುಂಬೈ ಪೋಹಾ ಮತ್ತು ವಡಾ ಪಾವ್ ಸೇರಿದಂತೆ ಹಲವಾರು ಭಕ್ಷ್ಯಗಳನ್ನು ಜನರಿಗೆ ಉಣಬಡಿಸಲಾಗುತ್ತದೆ.

ಮನಾಲಿಯಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿರುವ ಪ್ರಿನಿ ಗ್ರಾಮದ ಮನಾಲಿ-ನಗ್ಗರ್ ರಸ್ತೆಯಲ್ಲಿ ಕೆಫೆ ನಿರ್ಮಿಸಲಾಗಿದೆ. ಇಲ್ಲಿ ಹಿಮಾಚಲಿ ಪಾಕಪದ್ಧತಿಯನ್ನು ಆಹ್ಲಾದಕರ ವಾತಾವರಣದಲ್ಲಿ ನೀಡಲಾಗುತ್ತದೆ. ಇದು ಪ್ರದೇಶದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಕೆಫೆ ನಿರ್ಮಾಣ ಕೆಲಸವನ್ನು 2020ರಲ್ಲಿ ಪ್ರಾರಂಭಿಸಲಾಯಿತು. ಎರಡು ಅಂತಸ್ತಿನ ಕೆಫೆಯನ್ನು ಸ್ಥಳೀಯ ಕಾತ್ ಕುನಿ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಕೆಫೆಯ ವಾಸ್ತುಶಿಲ್ಪಿ ದುನಿ ಚಂದ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.