ಜಯಲಲಿತಾ ಬಯೋಪಿಕ್‌: 'ಪುರಚ್ಚಿ ತಲೈವಿ’ಯಾಗಿ ಕಂಗನಾ

ಸೋಮವಾರ, ಏಪ್ರಿಲ್ 22, 2019
29 °C

ಜಯಲಲಿತಾ ಬಯೋಪಿಕ್‌: 'ಪುರಚ್ಚಿ ತಲೈವಿ’ಯಾಗಿ ಕಂಗನಾ

Published:
Updated:

ಚೆನ್ನೈ: ಮಣಿಕರ್ಣಿಕಾ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್‌ ನಟಿ ಕಂಗನಾಗೆ ಇದೀಗ ಮತ್ತೊಂದು ಬಂಪರ್‌ ಆಫರ್‌ ಸಿಕ್ಕಿದೆ! 

ಹೌದು, ಒಂದು ಕಾಲದ ಜನಪ್ರಿಯ ನಟಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಬಯೋಪಿಕ್‌ ಸಿನಿಮಾದಲ್ಲಿ ಕಂಗಾನ ನಟಿಸಲಿದ್ದಾರೆ. ಕಂಗನಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. 

ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಹಿಂದಿ ಮತ್ತು ತೆಲುಗು ಅವತರಿಣಿಕೆಯಲ್ಲಿ ’ಜಯಾ’ ಎಂದಾದರೆ, ತಮಿಳಿನಲ್ಲಿ ’ತಲ್ಲೈವಿ’ ಎಂದು ನಾಮಕರಣ ಮಾಡಲಾಗಿದೆ. ಖ್ಯಾತ ತಮಿಳು ನಿರ್ದೇಶಕ ಎ.ಎಲ್.ವಿಜಯ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. 

ಬಾಹುಬಲಿ ಹಾಗೂ ಮಣಿಕರ್ಣಿಕಾ ಸಿನಿಮಾಗಳಿಗೆ ಕಥೆ ಬರೆದಿರುವ ವಿಜಯೇಂದರ ಪ್ರಸಾದ್‌ ಈ ಸಿನಿಮಾಕ್ಕೂ ಕಥೆ ಬರೆದಿದ್ದಾರೆ. ವಿಷ್ಣುವರ್ದನ್‌ ಇಂದೂರಿ ಮತ್ತು ಶೈಲೇಶ್‌ ಸಿಂಗ್‌ ತಲೈವಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. 

ಜಯಲಲಿತಾ ಅವರ ಸಿನಿಮಾ ಮತ್ತು ರಾಜಕೀಯ ಬದುಕಿನ ವಿವಿಧ ಆಯಾಮಗಳನ್ನು ಕಥನ ರೂಪನಕ್ಕೆ ತರಲಾಗಿದೆ. 

ಈಗಾಗಲೇ ಜಯಲಲಿತಾ ಬಯೋಪಿಕ್‌ ಆಧಾರಿತ ’ದಿ ಐರನ್‌ ಲೇಡಿ’ ಸಿನಿಮಾ ಕೂಡ ಸೆಟ್ಟೇರಿದೆ. ಈ ಚಿತ್ರ 2020ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದರಲ್ಲಿ ಜಯಲಲಿತಾ ಪಾತ್ರದಾರಿಯಾಗಿ ನಿತ್ಯಾ ಮೆನನ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಪ್ರಿಯದರ್ಶಿನಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !