ಕಳೆದ ಎರಡು ಮೂರು ವರ್ಷಗಳಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಂಕ್ ಹೊಂದಿದ್ದ ನಟಿಯರ ಪೈಕಿ ಅದಿತಿ ಕೂಡಾ ಒಬ್ಬರಾಗಿದ್ದರು. ಎಂ.ಸಿ. ವಿಜಯ್ ಪ್ರಸಾದ್ ನಿರ್ದೇಶನದ ‘ತೋತಾಪುರಿ’ ಸರಣಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ತ್ರಿಬಲ್ ರೈಡಿಂಗ್’, ‘ಆನ’, ‘Once upon a time in ಜಮಾಲಿಗುಡ್ಡ’ ಹೀಗೆ ಅದಿತಿ ಅವರ ಸಾಲು ಸಾಲು ಸಿನಿಮಾಗಳು ಕಳೆದೆರಡು ವರ್ಷದಲ್ಲಿ ಬಿಡುಗಡೆ ಕಂಡಿವೆ. ‘ಅದೊಂದಿತ್ತು ಕಾಲ’, ‘ಮಾಫಿಯಾ’, ‘ಮ್ಯಾಟ್ನಿ’, ‘ಛೂ ಮಂತರ್’ ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. ಸಿನಿಮಾವಷ್ಟೇ ಅಲ್ಲದೆ ವೆಬ್ ಸರಣಿಯಲ್ಲೂ ಅದಿತಿ ನಟಿಸಿದ್ದು, ‘ಲವ್ ಯು ಅಭಿ’ ಎಂಬ ಸರಣಿ ಇತ್ತೀಚೆಗಷ್ಟೇ ತೆರೆಕಂಡಿತ್ತು.