ಭಾನುವಾರ, ನವೆಂಬರ್ 27, 2022
23 °C

Kantara Amazon Prime | ನ. 24ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಂಬಾಳೆ ಫಿಲ್ಮ್ಸ್‌ನ ಸೂಪರ್‌ಹಿಟ್‌ ಚಿತ್ರ ‘ಕಾಂತಾರ’ ಒಟಿಟಿಯಲ್ಲಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದವರಿಗೆ ಒಂದು ಹೊಸ ಸುದ್ದಿ ಬಂದಿದೆ. ನ. 24ರಂದು ಅಮೆಜಾನ್‌ ಪ್ರೈಂ ಒಟಿಟಿ ವೇದಿಕೆಯಲ್ಲಿ ವಿಶೇಷ ಪ್ರೀಮಿಯರ್‌ ಸ್ಟ್ರೀಮಿಂಗ್‌ ನಡೆಯಲಿದೆ. 

ರಿಷಬ್‌ ಶೆಟ್ಟಿ ರಚನೆ, ನಟನೆ ಮತ್ತು ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್‌ 30ರಂದು ತೆರೆ ಕಂಡಿತ್ತು. ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡವೊಂದರಲ್ಲೇ ಒಂದು ಕೋಟಿಗೂ ಮಿಕ್ಕಿ ಟಿಕೆಟ್‌ಗಳು ಮಾರಾಟವಾಗಿದ್ದವು. 

ಸಪ್ತಮಿ ಗೌಡ, ರಘು ಪಾಂಡೇಶ್ವರ, ಪ್ರಕಾಶ್‌ ತೂಮಿನಾಡು, ಅಚ್ಯುತ್ ಕುಮಾರ್ ಮುಂತಾದ ಪ್ರಮುಖರು ತಾರಾಗಣದಲ್ಲಿದ್ದಾರೆ. 

ಅಮೆಜಾನ್‌ ಪ್ರೈಮ್‌ ಮೂಲಕ ಭಾರತ ಸೇರಿದಂತೆ 240 ದೇಶ, ಪ್ರಾಂತ್ಯಗಳಲ್ಲಿನ ಪ್ರೈಂ ಚಂದಾದಾರರು ಚಿತ್ರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳ ಆವೃತ್ತಿಗಳೂ ಲಭ್ಯ ಇವೆ ಎಂದು ಅಮೆಜಾನ್‌ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು