ನೃತ್ಯ ಕಲಾವಿದ ಮತ್ತು ನೃತ್ಯ ನಿರ್ದೇಶಕನಾಗಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಜಗ್ಗು ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಅವರ ಮೊದಲ ನಿರ್ದೇಶನದ ‘ಛಾಯ’ ಸಿನಿಮಾ ಮಾತಿನ ಲೇಪನ ಮುಗಿಸಿದ್ದು, ಇನ್ನಷ್ಟೇ ಹಾಡಿನ ಚಿತ್ರೀಕರಣ ಆರಂಭಿಸಬೇಕಿದೆ.

ಉಪೇಂದ್ರ ಅಭಿನಯದ ‘ಎ’ ಚಿತ್ರದಲ್ಲೂಕೆಲಸ ಮಾಡಿದ ಅನುಭವಿ ಜಗ್ಗು, ‘ಛಾಯ’ ಚಿತ್ರದ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನೃತ್ಯ ನಿರ್ದೇಶನದ ನೊಗವನ್ನೂ ಹೊತ್ತಿದ್ದಾರೆ.ಲವ್ ಹಾಗೂ ಸೆಂಟಿಮೆಂಟ್ ಕಥಾ ಹಂದರವಿರುವ ಈ ಚಿತ್ರದ ಮಾತಿನ ಮಂಟಪ ಕೆಲಸ ಮುಗಿದಿದ್ದು, ಬಾಕಿ ಇರುವ ಐದು ಹಾಡುಗಳು ಮತ್ತು ನಾಲ್ಕು ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗುತ್ತಿದೆ.

ಬೆಂಗಳೂರು, ಸಕಲೇಶಪುರ ಹಾಗೂ ಮಂಡ್ಯ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಲ್ವರು ಸ್ನೇಹಿತರ ನಡುವೆ ನಡೆಯುವ ಕಥೆ ಈ ಚಿತ್ರದಲ್ಲಿದೆ. ಜತೆಗೆ ದೆವ್ವ ದ್ವೇಷ ಸಾಧಿಸುವಒಂದು ಹಾರರ್ ಎಲಿಮೆಂಟ್ ಕೂಡಾ ಇರಲಿದೆಯಂತೆ.ನ್ಯೂ ಗ್ಲೋಬಲ್ ಕ್ರಿಯೇಶನ್ಸ್ ಲಾಂಛನದಲ್ಲಿ ಮಧುಗೌಡ್ರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರುಣ್ ಬೀರೂರು ಛಾಯಾಗ್ರಹಣ ನೀಡಿದ್ದಾರೆ.

ಆನಂದ್ ನಾಯಕನಾಗಿಮತ್ತು ನಾಯಕಿಯಾಗಿ ತೇಜು ನಟಿಸಿದ್ದಾರೆ. ತಾರಾಗಣದಲ್ಲಿರಾಜಶೇಖರ್, ಅನನ್ಯಾ, ನಯನ ಕೃಷ್ಣ, ಲಕ್ಪ್ಷ್ಮಣ್, ಗೋವಿಂದಪ್ಪ, ಲಕ್ಷ್ಮಿ, ಕಿಲ್ಲರ್ ವೆಂಕಟೇಶ್, ರಾಜ್ ಉದಯ್, ರೋಹಿಣಿ, ಅಮೃತ್ ರಾಜ್ ಇದ್ದಾರೆ.ಮಂಜು ಕವಿ ಸಾಹಿತ್ಯ– ಸಂಗೀತ, ಅಪ್ಪು ವೆಂಕಟೇಶ್, ಹ್ಯಾರಿಸ್ ಡ್ಯಾನಿ ಸಾಹಸ ನಿರ್ದೇಶನ, ದುರ್ಗ ಪಿ.ಎಸ್. ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.