ಆಟೊ ರಾಮಣ್ಣ: ಬಹುಮುಖಿ ಪ್ರತಿಭಾವಂತ, ಕಲಾವಿದ, ಸಮಾಜ ಸೇವಕ, ವೃತ್ತಿಯಲ್ಲಿ ರಿಕ್ಷಾ ಚಾಲಕ ಆಟೊ ರಾಮಣ್ಣ ಅವರು ತಮ್ಮದೇ ಹೆಸರಿನ ಶೀರ್ಷಿಕೆಯ ಚಿತ್ರ ನಿರ್ಮಿಸಿದ್ದಾರೆ. ಫೆ. 26ರಂದು ತೆರೆ ಕಾಣುತ್ತಿದೆ. ಸ್ವತಃ ಆಟೊ ರಾಮಣ್ಣ ಮತ್ತು ಮಹೇಂದ್ರ ಮನ್ನೋತ್ ಪ್ರಧಾನ ಪಾತ್ರಗಳಲ್ಲಿದ್ದಾರೆ. ಕಥೆ, ಸಂಭಾಷಣೆ, ಚಿತ್ರಕಥೆ, ಸಾಹಸ ಮತ್ತು ನಿರ್ಮಾಣ ಆಟೊ ರಾಮಣ್ಣ ಅವರದ್ದೇ. ದೊಡ್ಡರಂಗೇಗೌಡ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರಿಷಬ್ ರತ್ನಂ ಅವರ ಸಂಗೀತವಿದೆ. ಅಜಯ್ ವಾರಿಯರ್ ಅವರು ಹಾಡಿದ್ದಾರೆ.

ಸ್ಕೇರಿ ಫಾರೆಸ್ಟ್: ‘ಸ್ಕೇರಿ ಫಾರೆಸ್ಟ್’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ.
ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯ ಜಯಪ್ರಭು ಆರ್. ಲಿಂಗಾಯತ್ ಈ ಚಿತ್ರದ ನಿರ್ಮಾಪಕ ಹಾಗೂ ನಾಯಕ. ಜೀತ್ ರಾಯ್ದತ್ ಈ ಚಿತ್ರದ ದ್ವಿತೀಯ ನಾಯಕ. ಬಹುಭಾಷಾ ನಟ ಯಶ್‌ಪಾಲ್ ಶರ್ಮ ಪ್ರಮುಖ ಪಾತ್ರದಲ್ಲಿದ್ದಾರೆ. ಕೊಡಗಿನ ಟೀನಾ ಪೊನ್ನಪ್ಪ, ಆಮ್ ರೀನ್, ಕಲ್ಪನಾ ಈ ಚಿತ್ರದ ನಾಯಕಿಯರು.

ಸಂಜಯ್ ಅಭೀರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.
ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತ್ರಿಕೋನ ಪ್ರೇಮ ಕಥೆಯನ್ನೊಳಗೊಂಡಿದೆ ಈ ಚಿತ್ರ. ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.