‘ಕೋಟ್ಯಧಿಪತಿ’ ಕುರ್ಚಿಯಲ್ಲಿ ಮತ್ತೆ ಪುನೀತ್?

7

‘ಕೋಟ್ಯಧಿಪತಿ’ ಕುರ್ಚಿಯಲ್ಲಿ ಮತ್ತೆ ಪುನೀತ್?

Published:
Updated:
Deccan Herald

‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮ ಕಿರುತೆರೆ ಇತಿಹಾಸದಲ್ಲಿಯೇ ಬಹಳ ಸುದ್ದಿ ಮಾಡಿದ ಕಾರ್ಯಕ್ರಮಗಳಲ್ಲಿ ಒಂದು. ನಂತರದ ಅದು ‘ಕನ್ನಡದ ಕೋಟ್ಯಧಿಪತಿ’ಯಾಗಿ ಕನ್ನಡಕ್ಕೂ ಬಂದಿದ್ದು ತಿಳಿದೇ ಇದೆ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಕನ್ನಡದಲ್ಲಿ ‘ಕೋಟ್ಯಧಿಪತಿ’ಯ ನಿರೂಪಣೆಯ ಚುಕ್ಕಾಣಿಯನ್ನು ಮೊದಲು ಹಿಡಿದವರು ನಟ ಪುನೀತ್ ರಾಜ್‌ಕುಮಾರ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಕಾರ್ಯಕ್ರಮದ ಎರಡು ಸೀಸನ್‌ಗಳು ಯಶಸ್ವಿಯಾಗಿ ನಡೆದಿದ್ದವು. 

ಮೂರನೇ ಸೀಸನ್‌ ಕೂಡ ಇತ್ತೀಚೆಗಷ್ಟೇ ಮುಗಿದಿದೆ. ಆದರೆ ಮೂರನೇ ಸೀಸನ್‌ನಲ್ಲಿ ಪುನೀತ್ ನಿರೂಪಕರಾಗಿ ಕಾಣಿಸಿಕೊಂಡಿರಲಿಲ್ಲ. ‘ನಟ ಸಾರ್ವಭೌಮ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿ ಪುನೀತ್ ಕಾಣಿಸಿಕೊಂಡಿರಲಿಲ್ಲ. ಮೂರನೇ ಸೀಸನ್‌ ಅನ್ನು ನಡೆಸಿಕೊಟ್ಟಿದ್ದು ನಟ ರಮೇಶ್ ಅರವಿಂದ್. ಆದರೆ ಈ ಸೀಸನ್ ಅಷ್ಟೊಂದು ಜನಪ್ರಿಯ ಆಗಲಿಲ್ಲ. 

‘ಕನ್ನಡದ ಕೋಟ್ಯಧಿಪತಿ’ಯ ಮುಂದಿನ ಸೀಸನ್ ಯಾರು ನಡೆಸಿಕೊಡಲಿದ್ದಾರೆ ಎಂಬ ಚರ್ಚೆಯೊಂದು ಈಗ ಆರಂಭವಾಗಿದೆ. ಮೂಲಗಳ ಪ್ರಕಾರ ನಾಲ್ಕನೇ ಸೀಸನ್‌ನಲ್ಲಿ ಮತ್ತೆ ಪುನೀತ್ ಅವರೇ ನಿರೂಪಣೆಯ ಕುರ್ಚಿ ಏರಲಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಸೀಸನ್‌ ‘ಕೋಟ್ಯಧಿಪತಿ’ ಪ್ರಸಾರವಾಗುವ ಜಾಗವೂ ಬದಲಾಗಲಿದೆಯಂತೆ. ‘ಕೋಟ್ಯಧಿಪತಿ’ಯ ಮುಂದಿನ ಸೀಸನ್‌ ಅನ್ನು ವಯಕಾಮ್ 18 ಬಳಗ ಕೊಂಡುಕೊಂಡಿದ್ದು, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ’’ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. 

ಪುನೀತ್ ಇತ್ತೀಚೆಗೆ ಕಲರ್ಸ್‌ ವಾಹಿನಿಯಲ್ಲಿ ‘ಫ್ಯಾಮಿಲಿ ಪವರ್’ ಎಂಬ ರಿಯಾಲಿಟಿ ಷೋ ಒಂದನ್ನು ನಡೆಸಿಕೊಟ್ಟಿದ್ದರು. ಇದೀಗ ಮತ್ತೆ ಕೋಟ್ಯಧಿಪತಿಯ ಮೂಲಕ ಕಲರ್ಸ್‌ ವಾಹಿನಿಯಲ್ಲಿ ಮಿಂಚಲಿದ್ದಾರೆ. ಅದಕ್ಕಾಗಿ ಸಿದ್ಧತೆಯೂ ನಡೆದಿದೆ ಎನ್ನಲಾಗುತ್ತಿದೆ.

ಆದರೆ ಈ ಕುರಿತು ಸ್ವಾರ್‌ ಸುವರ್ಣ ಆಗಲಿ, ಕಲರ್ಸ್‌ ವಾಹಿನಿಯಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದಿನ ಸೀಸನ್ ಯಾವತ್ತಿನಿಂದ ಆರಂಭವಾಗುತ್ತಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !