ಮಂಗಳವಾರ, ಡಿಸೆಂಬರ್ 7, 2021
24 °C

ನಾನು ನಿರ್ಬಂಧಕ್ಕೆ ಒಳಗಾಗಿದ್ದೇನೆ: ಕರಣ್‌ ಜೋಹರ್‌ ಹೇಳಿಕೆ ಹಿಂದಿನ ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ನಿರ್ದೇಶಕ ಕರಣ್‌ ಜೋಹರ್‌ಗೆ ವಿವಾದಗಳೇನೂ ಹೊಸದಲ್ಲ. ಈ ಹಿಂದೆ ಕಾಫಿ ವಿತ್‌ ಕರಣ್‌, ಎಐಬಿ ರೋಸ್ಟ್‌ ಹಾಗೂ ಬಿಗ್‌ ಬಾಸ್‌(ಒಟಿಟಿ) ಶೋಗಳಲ್ಲಿ ಅವರು ನೀಡಿರುವ ಹೇಳಿಕೆಗಳು ವಿವಾದದ ಕಿಡಿಗಳನ್ನೇ ಹೊತ್ತಿಸಿದ್ದವು. ಆದರೆ, ಬಾಲಿವುಡ್‌ನ ಖ್ಯಾತ ನಿರ್ಮಾಪಕರೂ ಆಗಿರುವ ಕರಣ್‌ ಜೋಹರ್‌ ಇನ್ನು ಮುಂದೆ ವಿವಾದಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಈ ಕುರಿತು ಫಿಲ್ಮ್‌ ಕಂಪ್ಯಾನಿಯನ್‌ ಜೊತೆ ಬುಧವಾರ ಮಾತನಾಡಿರುವ ಅವರು, 'ನನ್ನ ತಲೆಯಲ್ಲಿ ಹಲವು ವಿಚಾರಗಳು ಓಡುತ್ತವೆ. ಆದರೆ, ಅವುಗಳನ್ನು ಹೇಳಲು ನಾನು ಬಯಸುತ್ತಿಲ್ಲ. ಕಾರಣ, ನಾನು ನಿರ್ಬಂಧಕ್ಕೆ ಒಳಗಾಗಿದ್ದೇನೆ' ಎಂದು ತಿಳಿಸಿದ್ದಾರೆ.

'ನಿರ್ಬಂಧಕ್ಕೆ ಒಳಗಾಗಿರುವುದು ಬೇರೆ ಯಾವುದೇ ಕಾರಣಕ್ಕಾಗಿ ಅಲ್ಲ. ಈ ಹಿಂದಿನ ನನ್ನ ಹೇಳಿಕೆಗಳು ಬೇರೆಯವರ ಮನಸ್ಸಿಗೆ ನೋವು ಮಾಡಿವೆ. ಇದು ನನಗೀಗ ಬೇಡವಾಗಿದೆ' ಎಂದು ಕರಣ್‌ ಹೇಳಿದ್ದಾರೆ.

'ಇನ್ನು ಮುಂದೆ ಕೇವಲ ಚಿತ್ರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ನನ್ನ ಶಕ್ತಿಯನ್ನು ವ್ಯಯಿಸಲು ಬಯಸುತ್ತೇನೆ. ನಾನು ಹೇಳಲು ಬಯಸುವ ಬಹಳಷ್ಟು ವಿಚಾರಗಳಿಗೆ ತಡೆಯೊಡ್ಡಲಿದ್ದೇನೆ. ಇದು ನನಗೆ ನೋವಿನ ಸಂಗತಿಯೂ ಹೌದು' ಎಂದು ಕರಣ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಲಿರುವ 'ಒನ್ ಮೈಕ್ ಸ್ಟ್ಯಾಂಡ್: ಸೀಸನ್ 2' ನಲ್ಲಿ ಕರಣ್‌ ಕಾಣಿಸಿಕೊಳ್ಳಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು