ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 9ಕ್ಕೆ ಒಟಿಟಿಗೆ ಕಾಟೇರ ಸಿನಿಮಾ

ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಫೆ.9ರಂದು ಒಟಿಟಿ ವೇದಿಕೆಗೆ
Published 6 ಫೆಬ್ರುವರಿ 2024, 1:03 IST
Last Updated 6 ಫೆಬ್ರುವರಿ 2024, 3:10 IST
ಅಕ್ಷರ ಗಾತ್ರ

ಕಳೆದ ವರ್ಷ ಡಿಸೆಂಬರ್‌ 29ರಂದು ಬಿಡುಗಡೆಗೊಂಡು ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದ ನಟ ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಫೆ.9ರಂದು ಒಟಿಟಿ ವೇದಿಕೆ ಜೀ5ನಲ್ಲಿ ಬಿಡುಗಡೆಯಾಗಲಿದೆ. 

ಸಾಮಾನ್ಯವಾಗಿ ಬಿಡುಗಡೆಯಾದ 30–40 ದಿನಗಳಲ್ಲಿ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತವೆ. ‘ಕಾಟೇರ’, 43 ದಿನಗಳ ಬಳಿಕ ಒಟಿಟಿ ವೇದಿಕೆಗೆ ಹೆಜ್ಜೆ ಇಡಲಿದೆ. ‘ಕಾಟೇರ’ ಬಿಡುಗಡೆಯಾಗಿ ಆರನೇ ವಾರವೂ ಕೆಲವಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರಸ್ತುತ 196 ಚಿತ್ರಮಂದಿರ ಹಾಗೂ 63 ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ‘ಯಜಮಾನ’ ಬಳಿಕ ದರ್ಶನ್‌ ಸಿನಿಪಯಣದ ಗ್ರಾಫ್‌ ಏರಿಸಿದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನೂರು ಕೋಟಿಗೂ ಅಧಿಕ ಹಣ ಬಾಚಿದೆ. ನೆಲದ ಕಥೆಯಿದ್ದ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ರಾಕ್‌ಲೈನ್‌ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾ ಈಗಾಗಲೇ ಜೀ5 ಜೊತೆ ವಹಿವಾಟು ಮುಗಿಸಿದೆ. ನಿರ್ಮಾಪಕರು ಹಾಗೂ ಒಟಿಟಿ ವೇದಿಕೆ ಮಾಡಿಕೊಂಡ ಒಡಂಬಡಿಕೆಯಂತೆ ಪ್ರೀಮಿಯರ್‌ ಆಗಲಿದೆ. 

‌‘ಕಾಟೇರ’ ಮೂಲಕ 1970ರ ಕಾಲಘಟ್ಟದ ಕಥೆಯನ್ನು ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮು ಈ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾದ ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಸಂಭಾಷಣೆ ಬರೆದ ಮಾಸ್ತಿಗೂ ಈ ಸಿನಿಮಾ ಮರೆಯಲಾಗದ ಯಶಸ್ಸು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT