ಗುರುವಾರ , ಆಗಸ್ಟ್ 18, 2022
24 °C

ಜೋಯಾ ಅಖ್ತರ್‌ ಸಿನಿಮಾದಲ್ಲಿ ರಣವೀರ್‌, ಕತ್ರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಕತ್ರೀನಾ ಕೈಫ್‌ ಹಾಗೂ ರಣವೀರ್‌ ಸಿಂಗ್‌ ಇಬ್ಬರೂ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು. ಇಬ್ಬರಿಗೂ ತಮ್ಮನ್ನು ಪ್ರೀತಿಸುವ, ಆರಾಧಿಸುವ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅಕ್ಷಯ್‌ ಕುಮಾರ್, ಅಜಯ್‌ ದೇವಗನ್‌ ನಟನೆಯ ‘ಸೂರ್ಯವಂಶಿ’ ಚಿತ್ರದ ಕ್ಲೈಮಾಕ್ಸ್‌ನಲ್ಲಿ ಇವರಿಬ್ಬರು ಜೊತೆಗೆ ತೆರೆ ಹಂಚಿಕೊಂಡಿದ್ದನ್ನು ಬಿಟ್ಟರೆ, ಇಲ್ಲಿಯವರೆಗೂ ಯಾವ ಸಿನಿಮಾದಲ್ಲೂ ಜೋಡಿಯಾಗಿ ನಟಿಸಿಲ್ಲ.   

ಈಗಿನ ಸುದ್ದಿ ಏನೆಂದರೆ, ನಿರ್ದೇಶಕಿ ಜೋಯಾ ಅಖ್ತರ್‌ ಅವರ ಮುಂದಿನ ಚಿತ್ರದಲ್ಲಿ ರಣವೀರ್‌, ಕತ್ರೀನಾ ಜೋಡಿಯಾಗಿ ನಟಿಸಲಿದ್ದಾರೆ. ಚಿತ್ರಕ್ಕೆ ಇಬ್ಬರ ಹೆಸರೂ ಅಂತಿಮಗೊಂಡಿದೆ ಎಂದು ಬಾಲಿವುಡ್‌ ಅಂಗಳದಿಂದ ಸುದ್ದಿಯಾಗಿದೆ. ಇದು ಗ್ಯಾಂಗ್‌ಸ್ಟರ್‌ ಕತೆಯನ್ನೊಳಗೊಂಡ ಸಿನಿಮಾ. 

‘ಗ್ಯಾಂಗ್‌ಸ್ಟರ್ ಕಥೆಯಾದರೂ, ಸಿನಿಮಾದಲ್ಲಿ ತುಂಬಾ ರೊಮ್ಯಾಂಟಿಕ್ ದೃಶ್ಯಗಳಿವೆ.‌  ಕತ್ರೀನಾ , ರಣವೀರ್‌ ಇದೇ ಮೊದಲ ಬಾರಿಗೆ ಇಂಥ ರೋಮ್ಯಾಂಟಿಕ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣವೀರ್‌ ಗ್ಯಾಂಗ್‌ಸ್ಟರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕತ್ರೀನಾ ಪಾತ್ರವೂ ಆಸಕ್ತಿಕರ ಹಾಗೂ ಪ್ರಾಮುಖ್ಯ ಪಡೆದಿದೆ. ಕತ್ರೀನಾ ಹಾಗೂ ಜೋಯಾ ಈ ಮೊದಲಿನಿಂದಲೂ ಉತ್ತಮ ಸ್ನೇಹಿತರು. ನಿರ್ದೇಶಕರು ಕತೆಯನ್ನು ವಿವರಿಸುತ್ತಿದ್ದಾಗಲೇ ಅವರು ನಟಿಸಲು ಒಪ್ಪಿಕೊಂಡಿದ್ದಾರೆ’ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 

ಇದು ಜೋಯಾ ಅಖ್ತರ್‌ ಜೊತೆ ರಣವೀರ್‌ ಮಾಡುತ್ತಿರುವ ಮೂರನೇ ಸಿನಿಮಾವಾದರೆ, ಕತ್ರೀನಾ ಕೈಫ್‌  ಎರಡನೇ ಬಾರಿ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು