ಗುರುವಾರ , ಫೆಬ್ರವರಿ 27, 2020
19 °C

ಸೂರ್ಯವಂಶಿ ಸಿನಿಮಾ ಸೆಟ್‌ನಲ್ಲಿ ಕಸಗುಡಿಸಿದ ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಸ್ವಚ್ಛತೆಗೆ ಆದ್ಯತೆ ನೀಡುವ ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್‌ ಕಸ ಗುಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಷ್ಟಕ್ಕೂ ಕತ್ರಿನಾ ಕಸಗುಡಿಸುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದವರು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌. ಅಷ್ಟಕ್ಕೂ ಕತ್ರಿನಾ ಕಸ ಗುಡಿಸಿದ್ದು ಯಾಕೆ? ಮತ್ತು ಎಲ್ಲಿ? ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.  

ಅಕ್ಷಯ್‌ ಮತ್ತು ಕತ್ರಿನಾ ಸೂರ್ಯವಂಶಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್‌ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಕಸ ಬಿದ್ದಿರುವುದನ್ನು ಕಂಡ ಕತ್ರಿನಾ ಕಸ ಪೊರಕೆ ತೆಗೆದುಕೊಂಡು ಕಸ ಗುಡಿಸಿದ್ದಾರೆ. ಇದನ್ನು ವಿಡಿಯೊ ಮಾಡಿ, ಅಕ್ಷಯ್‌ ಕುಮಾರ್‌ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 

 
 
 
 
 
 
 
 
 
 
 
 
 

Spotted : The newest #SwachhBharat brand ambassador on the sets of #Sooryavanshi 😬 @katrinakaif #BTS

A post shared by Akshay Kumar (@akshaykumar) on

ಅರೆರೇ...ಕತ್ರಿನಾ ಜೀ ಏನು ಮಾಡುತ್ತಿರುವಿರಿ? ಎಂಬ ಅಡಿ ಬರಹ ಬರೆದು ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಕ್ಷಯ್‌ ‘ಸ್ವಚ್ಛ ಭಾರತ‘ ಅಭಿಯಾನದ ಹೊಸ ರಾಯಭಾರಿ ಎಂದು ಬರೆಯುವ ಮೂಲಕ ಕತ್ರಿನಾರನ್ನು ಕಿಚಾಯಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಈ ವಿಡಿಯೊಗೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.  

ಬಾಲಿವುಡ್‌ ಅಂಗಳದಲ್ಲಿ ಸೂರ್ಯವಂಶಿ ಸಿನಿಮಾ ಬಾರೀ ಕೂತುಹಲ ಕೆರಳಿಸಿದೆ. ಈ ಚಿತ್ರಕ್ಕೆ ಅಕ್ಷಯ್‌ ಕುಮಾರ್‌ ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸೂರ್ಯವಂಶಿ ಚಿತ್ರವನ್ನು ಕರಣ್‌ ಜೋಹರ್‌ ಮತ್ತು ರೋಹಿತ್‌ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರೋಹಿತ್ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಕತ್ರಿನಾ ಕೈಫ್‌, ಅಜಯ್‌ ದೇವಗನ್‌, ರಣವೀರ್‌ ಸಿಂಗ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸೂರ್ಯವಂಶಿ ಸಿನಿಮಾ ಮಾರ್ಚ್‌ 27ಕ್ಕೆ ತೆರೆಗೆ ಬರಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು