ಕುತೂಹಲದ ‘ಕವಲುದಾರಿ’

7

ಕುತೂಹಲದ ‘ಕವಲುದಾರಿ’

Published:
Updated:

ದಿಕ್ಕು ದೆಸೆ ಇಲ್ಲದೇ ಬೆಳೆಯುತ್ತಿರುವ ಊರಿದು. ಅರಮನೆ ಕೆಳಗೆ ಸಿಗೋ ಮೂಳೆ ಬಗ್ಗೆ ನೀವ್ಯಾಕೆ ಇಷ್ಟೊಂದು ಇಂಟರೆಸ್ಟ್ ತೋರಿಸ್ತಿದ್ದೀರಾ....

ಇದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯ ಪಿಆರ್‌ಕೆ ಅಡಿಯಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ ’ಕವಲುದಾರಿ’ಯಲ್ಲಿ ಸುಳಿದು ಹೋಗುವ ಡೈಲಾಗ್‌. ಮೂಳೆಗಳ ಹಿಂದಿನ ಕಥೆಯನ್ನು ಹುಡುಕಿ ಹೊರಡುವ ಟ್ರಾಫಿಕ್‌ ಪೊಲೀಸ್‌ ಮತ್ತು ಆತನಲ್ಲಿ ಮೂಡಿರುವ ಕುತೂಹಲವನ್ನು ತಣಿಸಿಕೊಳ್ಳುವ ಪ್ರಯತ್ನ ಟೀಸರ್‌ನ ಪ್ರತಿ ದೃಶ್ಯದಲ್ಲಿ ದಾಖಲಾಗಿದೆ. ಪತ್ತೆದಾರಿ ಸಿನಿಮಾಗೆ ಇರಬಹುದಾದ ಬಹಳಷ್ಟು ಅಂಶಗಳನ್ನು ಟೀಸರ್‌ನಲ್ಲಿ ಕಾಣಬಹುದು. 

ಈ ಸಿನಿಮಾದ ಟೀಸರ್ ಮೊದಲು ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ನಂತರ ಸೆ.03 ರಂದು ಭಾರತದಾದ್ಯಂತ ಬಿಡುಗಡೆಯಾಗಿದೆ.

ಒಂದು ನಿಮಿಷ 23 ಸೆಕೆಂಡ್‌ ಇರುವ ಈ ಟೀಸರ್‌ ಅನ್ನು ಅದಾಗಲೇ 4 ಲಕ್ಷ ಮಂದಿ ವೀಕ್ಷಿಸಿದ್ದು‌, 14 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ’ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ರೋಶಿನಿ ಪ್ರಕಾಶ್ ಚಿತ್ರದ ನಾಯಕಿ. ಅನಂತನಾಗ್, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್, ಸಮನ್ವಿತಾ ಶೆಟ್ಟಿ, ಸಂಪತ್‌ ಕುಮಾರ್ ಪ್ರಮುಖ ತಾರಗಣದಲ್ಲಿದ್ದಾರೆ. 

ಸಂಗೀತ ನಿರ್ದೇಶಕ ಚರಣ್ ರಾಜ್‌ , ಜಗದೀಶ್ ಎನ್ ಅವರ ಸಂಕಲನ, ಅದ್ವೈತ ಗುರುಮೂರ್ತಿ ಅವರ ಕ್ಯಾಮರ ಕೈ ಚಳಕ ಈ ಚಿತ್ರಕ್ಕಿದೆ. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !