ಭಾನುವಾರ, ಜನವರಿ 19, 2020
20 °C
Keerthy Suresh

ರಜನಿಕಾಂತ್‌ ಜೊತೆ ನಟಿಸಲು ಮಣಿರತ್ನಂ ಚಿತ್ರ ತೊರೆದ ಕೀರ್ತಿ ಸುರೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಮಗಳಾಗಿ ಕೀರ್ತಿ ಸುರೇಶ್‌ ‘ತಲೈವರ್‌ 168’ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖಚಿತವಾಗಿದೆ. ಆದರೆ, ಈ ಸಿನಿಮಾಕ್ಕಾಗಿ ಕೀರ್ತಿ, ಸ್ಟಾರ್‌ ನಿರ್ದೇಶಕ ಮಣಿರತ್ನಂ ಅವರ ಬಹುತಾರಾಗಣದ ಚಿತ್ರ ತೊರೆದಿದ್ದಾರೆ. 

‘ತಲೈವರ್‌ 168’ ಚಿತ್ರಕ್ಕೂ ಮುನ್ನವೇ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್‌ ಸೆಲ್ವನ್‌’ ಚಿತ್ರಕ್ಕೆ ಒಪ್ಪಿಕೊಂಡಿದ್ದರು.  ಬಳಿಕ ತಲೈವರ್‌ ಚಿತ್ರದಲ್ಲಿ ರಜನಿಕಾಂತ್‌ ಮಗಳ ಪಾತ್ರದ ಅವಕಾಶ ಹುಡುಕಿಕೊಂಡು ಬಂತು. ಈ ಎರಡೂ ಚಿತ್ರಗಳ ಚಿತ್ರೀಕರಣ ದಿನಾಂಕ ಕೀರ್ತಿಗೆ ತೊಡಕಾಗಿದೆ.   

ಮಣಿರತ್ನಂ ಮತ್ತು ರಜನಿಕಾಂತ್‌ ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂದಿಗ್ಧದಲ್ಲಿ ಕೀರ್ತಿ ಕೊನೆಗೂ ತಲೈವರ್‌ ಮಗಳಾಗುವ ಅವಕಾಶವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರಜನಿಕಾಂತ್‌ ಜತೆ ಅಭಿನಯಿಸುವ ಅವಕಾಶ ಯಾರಿಗುಂಟು, ಯಾರಿಗಿಲ್ಲ. ಇಂತಹ ಚಿನ್ನದಂಥ ಅವಕಾಶ ಕೈ ಬಿಡಲು ಇಚ್ಛಿಸದ ಕೀರ್ತಿ ಒಲ್ಲದ ಮನಸ್ಸಿನಿಂದ ಪೊನ್ನಿಯನ್‌ ಸೆಲ್ವನ್‌ ಚಿತ್ರತಂಡ ತೊರೆದಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. 

‘ಪೊನ್ನಿಯಿನ್‌ ಸೆಲ್ವನ್‌’ ಚಿತ್ರವು ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕದಾಂಬರಿ ಆಧರಿತ ಸಿನಿಮಾ. ಚಿತ್ರದ ಮೊದಲ ಭಾಗದ ಚಿತ್ರೀಕರಣ ಥಾಯ್ಲೆಂಡ್‌ನಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ವಿಕ್ರಮ್‌, ಜಯರಾಮ್‌ ರವಿ, ಕಾರ್ತಿ, ಐಶ್ವರ್ಯ ರೈ, ತ್ರಿಶಾ ಸೇರಿದಂತೆ ದೊಡ್ಡ ತಾರಾಗಣವಿದೆ. ಲೈಕಾ ಮತ್ತು ಮದ್ರಾಸ್‌ ಟಾಕೀಸ್‌ ಜೊತೆಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಎ.ಆರ್‌.ರೆಹಮಾನ್‌ ಸಂಗೀತ ನೀಡುತ್ತಿದ್ದಾರೆ. 

ಕೀರ್ತಿ ಸುರೇಶ್‌ ಕೈಯಲ್ಲಿ ‘ತಲೈವರ್‌ 168’ ಚಿತ್ರದ ಜೊತೆಗೆ ಕಾರ್ತಿಕ್‌ ಸುಬ್ಬುರಾಜ್‌ ಅವರ ‘ಪೆಂಗ್ವಿನ್‌’ ಚಿತ್ರವಿದೆ. ಹಾಗೆ ಅಜಯ್‌ ದೇವಗನ್‌ ಅಭಿನಯದ ‘ಮೈದಾನ್‌’ ಚಿತ್ರದ ಮೂಲಕ ಕೀರ್ತಿ ಸುರೇಶ್‌ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು