ಬುಧವಾರ, ಜೂನ್ 3, 2020
27 °C

ಅಮೆಜಾನ್‌ ಪ್ರೈಮ್‌ನಲ್ಲಿ ಕೀರ್ತಿ ಸಿನಿಮಾ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಕೀರ್ತಿ ಸುರೇಶ್‌ ಪ್ರಧಾನ ‍ಪಾತ್ರದಲ್ಲಿ ನಟಿಸಿರುವ, ಈಶ್ವರ್‌ ಕಾರ್ತಿಕ್‌ ನಿರ್ದೇಶನದ ಚೊಚ್ಚಲ ಸಿನಿಮಾ ‘ಪೆಂಗ್ವಿನ್‌’ ಇದೇ ಜೂನ್‌ ತಿಂಗಳಲ್ಲಿ ಡಿಜಿಟಲ್‌ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಮೇ ಮೊದಲ ವಾರದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ನಿಗದಿತ ಸಮಯಕ್ಕೆ ಬಿಡುಗಡೆ ಮಾಡಲು ಚಿತ್ರತಂಡಕ್ಕೆ ಸಾಧ್ಯವಾಗಿಲ್ಲ.

ಈಚೆಗಿನ ವರದಿ ಪ್ರಕಾರ ಈ ಚಿತ್ರದ ಹಕ್ಕನ್ನು ಅಮೆಜಾನ್‌ ಪ್ರೈಮ್‌ ವಿಡಿಯೊ ಪಡೆದುಕೊಂಡಿದ್ದು, ಜೂನ್‌ ತಿಂಗಳಲ್ಲಿ ಈ ಸಿನಿಮಾ ಡಿಜಿಟಲ್‌ ವೇದಿಕೆ ಮೂಲಕ ಪ್ರದರ್ಶನವಾಗಲಿದೆ.

ಈ ಚಿತ್ರಕ್ಕೆ ಕಾರ್ತಿಕ್‌ ಸುಬ್ಬರಾಜ್‌ ಅವರು ಬಂಡವಾಳ ಹೂಡಿದ್ದಾರೆ. ‘ಅಮೆಜಾನ್‌ ಪ್ರೈಮ್‌ ವಿಡಿಯೊ ಜೊತೆ ಚಿತ್ರದ ನಿರ್ಮಾಪಕರು ಆರಂಭಿಕ ಮಾತುಕತೆ ನಡೆಸಿದ್ದಾರೆ. ಈ ಚಿತ್ರವನ್ನು ತಮಿಳು ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಬಿಡುಗಡೆಗೊಳಿಸಲು ಅವರು ಯೋಜನೆ ಮಾಡುತ್ತಿದ್ದಾರೆ. ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ’ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 

‘ಪೆಂಗ್ವಿನ್’‌ ಸಿನಿಮಾವು ಮಹಿಳಾ ಕೇಂದ್ರಿತ ಥ್ರಿಲ್ಲರ್‌ ಕತೆಯಾಧಾರಿತವಾಗಿದೆ. ಈ ಸಿನಿಮಾದ ಟೈಟಲ್‌ ಹಾಗೂ ಮೊದಲ ಪೋಸ್ಟರ್‌ 2019ರ ಅಕ್ಟೋಬರ್‌ 17 ಕೀರ್ತಿ ಸುರೇಶ್‌ ಹುಟ್ಟುಹಬ್ಬದ ದಿನದಂದು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಕೀರ್ತಿ, ಗರ್ಭಿಣಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಹುಭಾಗ ಚಿತ್ರೀಕರಣವು ಊಟಿಯಲ್ಲಿ ನಡೆದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು