ಬೆಂಗಳೂರು:ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ಚಿತ್ರದ ಟೀಸರ್ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಒಂದು ದಿನ ಮೊದಲೇ (ಜ. 7ರಂದು) ರಾತ್ರಿ 9.29ಕ್ಕೆ ಬಿಡುಗಡೆ ಆಗಿದೆ. ತಂಡ ಈ ಮೊದಲು ಪ್ರಕಟಿಸಿದಂತೆ ಜ. 8ರಂದು ಬೆಳಿಗ್ಗೆ 10.18ಕ್ಕೆ ಬಿಡುಗಡೆ ಆಗಬೇಕಿತ್ತು. ಅಂದು ಚಿತ್ರದ ನಾಯಕ ನಟ ಯಶ್ ಅವರ ಜನ್ಮದಿನವೂ ಹೌದು. ಯುಟ್ಯೂಬ್ನಲ್ಲಿ ಬಿಡುಗಡೆಗಾಗಿ ವೇಳಾಪಟ್ಟಿ (ಷೆಡ್ಯೂಲ್) ಸಿದ್ಧಪಡಿಸಿ ಲೋಡ್ ಆಗಿದ್ದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿಬಿಟ್ಟಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹೊಂಬಾಳೆ ಫಿಲ್ಮ್ಸ್ ತಾನೇ ಅಧಿಕೃತವಾಗಿ ಟೀಸರ್ನ್ನು ಬಿಡುಗಡೆ ಮಾಡಿತು.

ಟೀಸರ್ ಬಿಡುಗಡೆ ಬಳಿಕ ವಿಡಿಯೋ ಹೇಳಿಕೆ ನೀಡಿದ ನಟ ಯಶ್, ‘ಯಾರೋ ಪುಣ್ಯಾತ್ಮರು ಒಂದು ದಿನ ಮೊದಲೇ ಟೀಸರನ್ನು ಹರಿಯಬಿಟ್ಟಿದ್ದಾರೆ. ಅದರಿಂದ ಅವರಿಗೇನು ಸಿಕ್ಕಿದೆಯೋ ಗೊತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ. ಟೀಸರನ್ನು ನೋಡಿ ಹಾಗೆಯೇ ಸಿನಿಮಾವನ್ನೂ ಪ್ರೋತ್ಸಾಹಿಸಿ’ ಎಂದು ವಿನಂತಿಸಿದ್ದಾರೆ.

ಬಿಡುಗಡೆಯಾದ 24 ನಿಮಿಷಗಳಲ್ಲಿ ಟೀಸರನ್ನು 1,47,300 ಮಂದಿ ವೀಕ್ಷಿಸಿದ್ದಾರೆ. ಚಿತ್ರದ ಯೂನಿವರ್ಸಲ್ ಟೀಸರ್ (ಎಲ್ಲ ಸಂದರ್ಭ, ಭಾಷೆ ಪ್ರದೇಶಗಳಿಗೆ ತಲುಪುವ ರೀತಿ) ಸಿದ್ಧಪಡಿಸಲಾಗಿದೆ. ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಇದ್ದಾರೆ. ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರ ಬಿಡುಗಡೆಯ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.