ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ ಚಾಪ್ಟರ್‌ 2 ಚಿತ್ರ ಬಿಡುಗಡೆ ದಿನಾಂಕ ಇಂದೇ ಪ್ರಕಟ.. ಇಲ್ಲಿದೆ ಮಾಹಿತಿ

Last Updated 29 ಜನವರಿ 2021, 6:39 IST
ಅಕ್ಷರ ಗಾತ್ರ

ಬಹು ನಿರೀಕ್ಷಿತ ಕೆಜಿಎಫ್‌ ಚಾಪ್ಟರ್‌ –2 ಚಿತ್ರದ ಬಿಡುಗಡೆಯ ದಿನಾಂಕ ಇಂದು ಸಂಜೆ 6.32ಕ್ಕೆ ಪ್ರಕಟವಾಗಲಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ದಿನಾಂಕ ಘೋಷಣೆಯ ಪೋಸ್ಟರ್‌ ಪ್ರಕಟಿಸಿ ಕುತೂಹಲ ಹೆಚ್ಚಿಸಿರುವ ಅವರು, ನಾವು ಕೊಟ್ಟ ಭಾಷೆಯು ಇಂದು ಸಂಜೆ 6.32ಕ್ಕೆ ಉಳಿಯಲಿದೆ ಎಂದು ಹೇಳಿದ್ದಾರೆ. ಪೋಸ್ಟರ್‌ನಲ್ಲೂ ಇದೇ ಬರಹ ಇದೆ.

ಚಿತ್ರದ ಟೀಸರನ್ನು ಜ. 7ರಂದು (ಇಂಟರ್‌ನೆಟ್‌ನಲ್ಲಿ ಹರಿದಾಡಿದ ಕಾರಣ ಜ. 8ರ ಬದಲು ಒಂದು ದಿನ ಮೊದಲೇ) ಬಿಡುಗಡೆ ಮಾಡಲಾಗಿತ್ತು. ಎಲ್ಲ ಭಾಷೆಗಳಿಗೂ ಅನ್ವಯವಾಗುವಂತೆ ಯೂನಿವರ್ಸಲ್‌ ಟೀಸರನ್ನು ಸಿದ್ಧಪಡಿಸಲಾಗಿತ್ತು.

ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT