ಕಾಲೇಜು ಹುಡುಗನ ನವಿರು ಪ್ರೇಮಕಥೆ ‘ಖಾಸಗಿ ಪುಟಗಳ’ಲ್ಲಿ ತೆರೆದುಕೊಂಡಿದೆ. ಚಿತ್ರದಲ್ಲಿ ಬಹುತೇಕ ಹೊಸ ಮುಖಗಳೇ ಇವೆ. ನವೆಂಬರ್ 18ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ವಿಶ್ವ ಈ ಚಿತ್ರದ ನಾಯಕ. ಶ್ವೇತಾ ಡಿಸೋಜಾ ನಾಯಕಿ. ಹಿಂದಿಯಲ್ಲಿ ‘ವೈ’ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡ ಅವರು ಕನ್ನಡದಲ್ಲಿ ಬಣ್ಣ ಹಚ್ಚಿದ್ದು ಇದೇ ಮೊದಲು. ಭೂಮಿ ಹೆಸರಿನ ಪಾತ್ರ ಅವರದ್ದು. ಮುಗ್ದೆ ಹಾಗೂ ಪ್ರಬುದ್ಧತೆಯ ಎರಡೂ ಛಾಯೆಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿದೆ. ನಾಲ್ಕು ಹಾಡುಗಳಿವೆ.ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ.

ಚೇತನ್ ದುರ್ಗಾ, ನಂದಕುಮಾರ್, ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಎಸ್ ವಿ ಎಂ ಮೋಷನ್ ಪಿಕ್ಚರ್ ಬ್ಯಾನರ್ ಅಡಿ ಮಂಜು ವಿ. ರಾಜ್, ವೀಣಾ ವಿ. ರಾಜ್, ಮಂಜುನಾಥ್ ಡಿ.ಎಸ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ,ರಾಕೇಶ್ ಆಚಾರ್ಯ ಬಿ.ಜಿ.ಎಂ ಮಾಡಿದ್ದು, ಆಶಿಕ್ ಕುಸುಗೋಳಿ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.