ಸೋಮವಾರ, ಸೆಪ್ಟೆಂಬರ್ 27, 2021
24 °C

ಕಿಚ್ಚನಿಗೆ ಜನ್ಮದಿನದ ಶುಭಾಶಯ ಹೇಳಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಳೆ(ಸೆ.2) ‘ಅಭಿನಯ ಚಕ್ರವರ್ತಿ’ ನಟ ಕಿಚ್ಚ ಸುದೀಪ್‌ ಅವರ ಜನ್ಮದಿನ. ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಅಭಿಮಾನಿಗಳು ಸಿದ್ಧತೆ ನಡೆಸಿಕೊಂಡಿದ್ದು, ಇದಕ್ಕಾಗಿ ವಿಶೇಷ ಕಾಮನ್‌ ಡಿಪಿಯನ್ನೂ ರಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರೂ ಕಿಚ್ಚನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. 

‘ಹ್ಯಾಪಿ ಬರ್ತ್‌ಡೇ ಸುದೀಪ್‌ ಜಿ. ನಿಮ್ಮ ಮುಂದಿನ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಚೋಪ್ರಾ ವಿಡಿಯೊದಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್‌, ‘ನಿಮ್ಮ ಶುಭಹಾರೈಕೆ ಖುಷಿ ನೀಡಿದೆ. ಧನ್ಯವಾದ ಸಹೋದರ. ನನ್ನ ಶುಭಹಾರೈಕೆ ನಿಮಗೆ ಸದಾ ಇರಲಿದೆ. ಇನ್ನಷ್ಟು ಸಾಧನೆಯನ್ನು ನೀವು ಮಾಡಿ’ ಎಂದಿದ್ದಾರೆ. 

ಇನ್ನು ಬುಧವಾರವೇ ಸುದೀಪ್‌ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ನಟ ಶ್ರೇಯಸ್‌ ಅವರನ್ನು ಮಾತಿನಲ್ಲೇ ಕಾಲೆಳೆದಿರುವ ನಟ ಸುದೀಪ್‌, ‘ನನ್ನ ಜನ್ಮದಿನ ನಾಳೆ. ನಾನು ನಿನ್ನಿಂದಾಗಲಿ ಅಥವಾ ನಿನ್ನ ತಂದೆ(ಕೆ.ಮಂಜು)ಯವರಿಂದ ಅಡ್ವಾನ್ಸ್‌ ತೆಗೆದುಕೊಳ್ಳುವುದಿಲ್ಲ’ ಎಂದಿದ್ದಾರೆ. 

ಸುದೀಪ್‌ ಅವರ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ದ ಮೊದಲ ಗ್ಲಿಮ್ಸ್‌ ಗುರುವಾರ ಬೆಳಗ್ಗೆ 11.05ಕ್ಕೆ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಸುದೀಪ್‌ ಅವರ ಕಾಮನ್‌ ಡಿಪಿ ಬಿಡುಗಡೆ ಮಾಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು