ಹೈದರಾಬಾದ್: ತೆಲುಗಿನಲ್ಲಿ ಈ ವರ್ಷ ತೆರೆಕಂಡ ಪ್ರಿನ್ಸ್ ಮಹೇಶ್ ಬಾಬು ಅಭಿನಯದ, ಅನಿಲ್ ರವಿಪುಡಿ ನಿರ್ದೇಶನದ 'ಸರಿಲೇರು ನೀಕೆವ್ವರು' ಸಿನಿಮಾವೂ ಸೂಪರ್ ಹಿಟ್ ಆಗಿದೆ.

'ಸರಿಲೇರು ನೀಕೆವ್ವರು' ಬಳಿಕ ಮಹೇಶ್ ಬಾಬು ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕೌತುಕ ಅವರ ಅಭಿಮಾನಿಗಳಲ್ಲಿತ್ತು. ಅವರು
‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ನಟಿಸುತ್ತಿದ್ದು ನಿರೀಕ್ಷೆಗಳು ಗರಿಗೆದರಿವೆ.

'ಗೀತ ಗೋವಿಂದಂ' ಚಿತ್ರದ ನಿರ್ದೇಶಕ ಪರಶುರಾಮ್ ಅವರು ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

ಈಗಾಗಲೇ ಕಿಚ್ಚ ಸುದೀಪ್ ಜೊತೆಗೆ ಒಂದು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಟಾಲಿವುಡ್ ಮಾಧ್ಯಮಗಳ ವರದಿ ಮಾಡಿವೆ. ಆದರೆ ಚಿತ್ರತಂಡ ಹಾಗೂ ಸುದೀಪ್ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರದ ನಾಯಕಿಯಾಗಿ ಕೀರ್ತಿ ಸುರೇಶ್ ಅಭಿನಯಿಸುವುದು ಪಕ್ಕಾ ಎನ್ನಲಾಗಿದೆ.

ಸರ್ಕಾರು ವಾರಿ ಪಾಟ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೊಸ ಗೆಟಪ್ನಲ್ಲಿ ಮಹೇಶ್ ಮಿಂಚಲಿರುವುದು ವಿಶೇಷ. ಫಸ್ಟ್ಲುಕ್ನಲ್ಲಿ ಮಹೇಶ್ ಬಾಬು ಕಿವಿಗೆ ಓಲೆ, ಕತ್ತಿನ ಭಾಗದಲ್ಲಿ ಒಂದು ರೂಪಾಯಿ ಟ್ಯಾಟೊ ಹಾಕಿ ಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

ಸಂಪೂರ್ಣವಾಗಿ ಲಾಕ್ಡೌನ್ ತೆರೆವಾದ ಬಳಿಕ ಚಿತ್ರೀಕರಣ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.