ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ಗೆ ‘ಕಿಕ್‌ 2’ ಬಿಡುಗಡೆ ಭಾಗ್ಯ

Last Updated 28 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮುಂದಿನ ಈದ್‌ಮಿಲಾದ್‌ಗೆ ಸಲ್ಮಾನ್‌ ಖಾನ್‌ ಅಭಿನಯದ ‘ಕಿಕ್‌ 2’ ಚಿತ್ರ ಬಿಡುಗಡೆಯಾಗಲಿದೆ.

ಸಲ್ಮಾನ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ‘ಕಿಕ್‌ 2’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಇದು 2014ರಲ್ಲಿ ಬಿಡುಗಡೆಯಾದ ‘ಕಿಕ್‌’ ಚಿತ್ರದ ಮುಂದಿನ ಅವತರಣಿಕೆ.

ಅದೇ ದಿನ ಅಕ್ಷಯ್‌ಕುಮಾರ್‌, ಕಿಯಾರಾ ಅಡ್ವಾಣಿ ಅಭಿನಯದ ‘ಲಕ್ಷ್ಮಿ ಬಾಂಬ್‌’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಎರಡು ಚಿತ್ರಗಳ ನಡುವೆ ಪೈಪೋಟಿ ನಡೆಯಲಿದೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ, ಸಲ್ಮಾನ್‌ ಹಾಗೂ ಆಲಿಯಾ ಭಟ್‌ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ‘ಇನ್‌ಶಾ ಅಲ್ಲಾಹ್‌’ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಸಲ್ಮಾನ್‌ ಖಾನ್ ಘೋಷಣೆ ಮಾಡಿದ್ದರು. ಅದರ ಬೆನ್ನಲ್ಲೇ ಈದ್‌ಗೆ ‘ಕಿಕ್‌ 2’ ಬಿಡುಗಡೆಯಾಗಲಿದೆ ಎಂದು ಹೇಳಿ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ.

‘ಕಿಕ್‌’ ಸಿನಿಮಾವು ಬಾಕ್ಸ್‌ ಆಫೀಸಿನಲ್ಲಿ ಉತ್ತಮ ಗಳಿಕೆ ಮಾಡಿದ ಚಿತ್ರ. ಈ ಚಿತ್ರದ ಸೀಕ್ವೆಲ್‌ನ ಚಿತ್ರಕತೆ ಸಿದ್ಧವಾಗಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ’ ಎಂದು ನಿರ್ದೇಶಕ ಸಾಜಿದ್‌ ನಾಡಿಯಾವಾಲಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT