ಸೋಮವಾರ, ಸೆಪ್ಟೆಂಬರ್ 27, 2021
21 °C
ಕಿಮ್ ಕರ್ದಷಿಯಾನ್ ನಾಲ್ಕನೇ ಮಗು

ಕಿಮ್‌ಗೆ ನಾಲ್ಕನೇ ಮಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ಸೆಲೆಬ್ರಿಟಿ ರೂಪದರ್ಶಿ ಮತ್ತು ರಿಯಾಲಿಟಿ ಟಿವಿ ಸ್ಟಾರ್  ಕಿಮ್ ಕರ್ದಷಿಯಾನ್ ಈಗ ನಾಲ್ಕನೇ ಮಗುವಿಗೆ ತಾಯಿಯಾಗಿದ್ದಾರೆ. ಪತಿ ಕಾನ್ಯೆ ವೆಸ್ಟ್‌ ಮತ್ತು ಕಿಮ್ ಜತೆಗೂಡಿ ಬಾಡಿಗೆ ತಾಯಿಯ ಮೂಲಕ ನಾಲ್ಕನೇ ಮಗುವನ್ನು ಪಡೆದಿರುವುದು ವಿಶೇಷ. ಈ ಹಿಂದೆಯೂ ಕಿಮ್, ಕಾನ್ಯೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು. 

ನಾಲ್ಕನೇ ಮಗುವಿನ ಕುರಿತು ಈಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಅವನು ಇಲ್ಲಿದ್ದಾನೆ ಮತ್ತು ಅವನು ಪರಿಪೂರ್ಣ’, ‘ಅವನು ಚಿಕಗೊನ ತಮ್ಮ, ಮುಂದಿನ ದಿನಗಳಲ್ಲಿ ಅವನು ಬಹಳಷ್ಟು ಬದಲಾವಣೆ ಹೊಂದುತ್ತಾನೆ. ಸದ್ಯಕ್ಕೆ ಅವನು ಅವಳಂತಿದ್ದಾನೆ’ ಎಂದು ಕಿಮ್ ಬರೆದುಕೊಂಡಿದ್ದಾರೆ.

38ರ ಹರೆಯದ ಕಿಮ್, ಅಮೆರಿಕದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ತನ್ನ ಮೈಬಣ್ಣದ ಉಡುಪು ತೊಟ್ಟು ನೀರಿನಿಂದ ಈಗಷ್ಟೇ ಎದ್ದ ಜಲಕನ್ಯೆಯಿಂದ ಗೋಚರಿಸುವಂತಿದ್ದ ಕಿಮ್, ನೆರೆದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ತಮ್ಮ ಆಕರ್ಷಕ ಮೈಮಾಟದ ಕಾರಣಕ್ಕಾಗಿ ಜಗತ್ತಿನಾದ್ಯಂತ ಲಕ್ಷಾಂತರ ಯುವಜನರ ಕಣ್ಮಣಿಯಾಗಿರುವ ಕಿಮ್, ತಮ್ಮ ಹೆಸರಿನದ್ದೇ ಸೌಂದರ್ಯ ಪ್ರಸಾದನಗಳನ್ನು ತಯಾರಿಸಿ ಆನ್‌ಲೈನ್ ಮೂಲಕ ಲಾಭ ಗಳಿಸುತ್ತಿದ್ದಾರೆ. 

ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಕಿಮ್, ಈ ಬಾರಿ ತಮ್ಮ ನಾಲ್ಕನೇ ಮಗುವಿನ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ತಮ್ಮ  ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್ ಖಾತೆಗಳಲ್ಲಿ ಮಕ್ಕಳ ಬಗೆಗಿರುವ ಅಪರಿಮಿತ ಪ್ರೀತಿಯನ್ನು ವ್ಯಕ್ತಪಡಿಸಿರುವ ಕಿಮ್, ‘ನನ್ನ ಮಕ್ಕಳು ನನ್ನ ಜೀವನ’ ಎಂದು ಬರೆದುಕೊಂಡಿದ್ದಾರೆ. ಕಿಮ್ ದಂಪತಿಗೆ ಈಗಾಗಲೇ ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.