ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಸ್’ ನೋಡಲು ಮುಜುಗರ ಬೇಡ

Last Updated 19 ಸೆಪ್ಟೆಂಬರ್ 2019, 19:36 IST
ಅಕ್ಷರ ಗಾತ್ರ

ಕಿಸ್‌ ಎಂದರೆ ಮುಜುಗರ ಪಡುವಂತದ್ದು ಏನೂ ಇಲ್ಲ. ಇದೊಂದು ವಿಶ್ವಮಾನ್ಯ ಪದ. ಕಿಸ್‌ ಎಂದಾಗ ಬೇರೆ ಅರ್ಥವನ್ನೂ ಕಲ್ಪಿಸಿಕೊಳ್ಳಬೇಡಿ.‘ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ (KISS)’ ಎಂದು ಮಾತು ಆರಂಭಿಸಿದರು ‘ಕಿಸ್‌’ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್‌.

ತಮ್ಮ ನಿರ್ದೇಶನದ ಐದನೆಯ ಮತ್ತು ಸ್ವಂತ ಬ್ಯಾನರ್‌ನ ಮೊದಲ ಚಿತ್ರ ‘ಕಿಸ್‌’ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವರು ಚಿತ್ರ ತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ಆಡಿಷನ್‌ಗೆ ಬಂದಿದ್ದ 220 ಹುಡುಗರಲ್ಲಿ ವಿರಾಟ್ ಅವರನ್ನುನನ್ನ ಅಮ್ಮನ ಶಿಫಾರಸಿನಂತೆ ಆಯ್ಕೆ ಮಾಡಿದ್ದೆ. ಶ್ರೀಲೀಲಾ ಕೂಡ ಆಡಿಷನ್‌ ಮೂಲಕ ಚಿತ್ರಕ್ಕೆ ಆಯ್ಕೆಯಾದವರು. ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ, ಅಷ್ಟೇ ಚೆನ್ನಾಗಿ ಡಾನ್ಸ್‌ ಮಾಡಿದ್ದಾರೆ. ನಮ್ಮ ಎರಡೂವರೆ ವರ್ಷಗಳ ಶ್ರಮ ಈಗ ಫಲಕೊಡುವ ಹಂತಕ್ಕೆ ಬಂದಿದೆ. ಚಲನಚಿತ್ರ ಪ್ರಮಾಣೀಕೃತ ಮಂಡಳಿಯಿಂದ ಚಿತ್ರಕ್ಕೆ ಯಾವುದೇ ದೃಶ್ಯಕ್ಕೆ ಕತ್ತರಿ ಇಲ್ಲದೆ, ಮ್ಯೂಟ್ ಮಾಡದೆ ಸಿಕ್ಕಿದೆ. ಪ್ರೇಕ್ಷಕರು ಸಿನಿಮಾ ನೋಡಿ ಕೊನೆಗೆ ‘ಕಿಸ್‌’ ಕೊಡುವುದನ್ನು ನಾವು ಸ್ವೀಕರಿಸುತ್ತೇವೆ ಎಂದು ಅವರು ಮಾತು ವಿಸ್ತರಿಸಿದರು.

‘ನೀನೆ ಮೊದಲು ನೀನೆ ಕೊನೆ’ ಪ್ರೇಮಗೀತೆಯನ್ನು ತಾಜಮಹಲ್‌ ಸೇರಿ ಏಳು ವಿಭಿನ್ನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.ಶ್ರೇಯಾ ಘೋಷಾಲ್‌ ಹಾಡಿರುವ ಈ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.ಯುಟ್ಯೂಬ್‍ನಲ್ಲಿ ಒಂದು ಕೋಟಿ ಜನರು ವೀಕ್ಷಿಸಿದ್ದಾರೆ ಎಂದರು.

ಪುನೀತ್‍ ರಾಜ್‍ಕುಮಾರ್ ಸಹಒಂದು ಗೀತೆ ಹಾಡಿದ್ದಾರೆ. ಟ್ರೈಲರ್‌ಗೆಧ್ರುವ ಸರ್ಜಾ ಧ್ವನಿ ನೀಡಿದ್ದರೆ,ಯಶ್ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ. ತಾರಾಗಣದಲ್ಲಿಚಿಕ್ಕಣ್ಣ, ಸಾಧುಕೋಕಿಲ, ದತ್ತಣ್ಣ, ಶಿವರಾಜ್‌ ಕೆ.ಆರ್.ಪೇಟೆ ಇದ್ದಾರೆ. ಅಲ್ಲದೆ, 120 ಮಂದಿ ಹೊಸ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುವ ಮಾತು ಸೇರಿಸಿದರು ಅರ್ಜುನ್‌.

‘ಪರಿಣತರ ತಂಡದ ಜತೆಗೆ ನನ್ನ ಮೊದಲ ಸಿನಿಮಾ ಆಗಿರುವುದಕ್ಕೆನಾನೇ ಪುಣ್ಯವಂತ ಎನಿಸಿದೆ. ಚಿತ್ರದ ಪ್ರತಿ ಪ್ರೇಮು, ಪ್ರತಿ ಹಾಡಿನಲ್ಲೂ ನಿರ್ದೇಶಕರ ಪರ್ಫೆಕ್ಷನ್‌ ಎದ್ದುಕಾಣುತ್ತದೆ’ ಎಂದರು ನಾಯಕ ನಟ ವಿರಾಟ್‌.

‘ಲೇಟಾಗಿ ಬಂದ್ರು ಲೇಟೆಸ್ಟಾಗಿಬರ‍್ತಾ ಇದೀವಿ’ ಎಂದು ಮಾತು ಆರಂಭಿಸಿದ ನಾಯಕಿ ಶ್ರೀಲೀಲಾ, ‘ಚಿತ್ರದಲ್ಲಿ ನನ್ನ ಪಾತ್ರದ ಹೆಸರು ನಂದಿನಿ. ಈಗಿನ ಹುಡುಗಿಯರು ಹೇಗಿರುತ್ತಾರೆ ಎನ್ನುವುದನ್ನು ನನ್ನ ಪಾತ್ರ ಹೇಳಲಿದೆ. ಚಿತ್ರದಲ್ಲಿ ಕಿಸ್ ದೃಶ್ಯಗಳು ಇವೆ. ಆದರೆ, ಯಾವುದೇ ಅಶ್ಲೀಲತೆ ಇಲ್ಲ ಎಂದು ಚುಟುಕಾಗಿ ಹೇಳಿದರು.

ನಾಯಕಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಂದರ್ ಮತ್ತುಖಳನಾಗಿ ನಟಿಸಿರುವ ಶಮಂತ್‍ ಶೆಟ್ಟಿ ಅನಿಸಿಕೆ ಹಂಚಿಕೊಂಡರು.

ಅರ್ಜುನ್‌ ನಿರ್ದೇಶನದ ಜತೆಗೆ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚನೆಯ ಹೊಣೆ ನಿಭಾಯಿಸಿದ್ದಾರೆ. ಇಮ್ರಾನ್‌ ಸರ್ದಾರಿಯಾ ನೃತ್ಯ ಸಂಯೋಜನೆ, ಸಾನಿಯಾ ವಸ್ತ್ರ ವಿನ್ಯಾಸ, ಎ.ಜೆ.ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT