ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ 11ಕ್ಕೆ ತೆರೆ ಕಾಣಲಿದೆ ಕಿಯಾರಾ ನಟನೆಯ ‘ಇಂದೂ ಕಿ ಜವಾನಿ’

Last Updated 22 ನವೆಂಬರ್ 2020, 7:09 IST
ಅಕ್ಷರ ಗಾತ್ರ

ಅಬಿರ್‌ ಸೇನ್‌ಗುಪ್ತಾ ನಿರ್ದೇಶನದ ಕಿಯಾರಾ ಅಡ್ವಾಣಿ ನಟನೆಯ ಬಹು ನಿರೀಕ್ಷಿತ ‘ಇಂದೂ ಕೀ ಜವಾನಿ’ ಚಿತ್ರ ಡಿಸೆಂಬರ್ 1ಕ್ಕೆ ತೆರೆ ಕಾಣಲಿದೆ.

ಈ ಚಿತ್ರದಲ್ಲಿ ಕಿಯಾರಾ ಗಾಜಿಯಾಬಾದ್‌ ಮೂಲದ ಮಹಿಳೆಯೊಬ್ಬಳು ಡೇಟಿಂಗ್ ಆ್ಯಪ್‌ನಲ್ಲಿ ಪ್ರಯೋಗಗಳನ್ನು ಮಾಡಿ ಜೀವನಕ್ಕೆ ತಂದುಕೊಳ್ಳುವ ತಿರುವುಗಳ ಕಥೆಯನ್ನು ಆಧರಿಸಿದ ಸಿನಿಮಾವಾಗಿದೆ. ಇಂದೂ ಗುಪ್ತಾ ಎಂಬ ಮಹಿಳೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಕಿಯಾರಾ.

ಇದರಲ್ಲಿ ಕಿಯಾರಾ ಹಾಗೂ ಆದಿತ್ಯ ಸೀಲ್ ತೆರೆ ಹಂಚಿಕೊಂಡಿದ್ದಾರೆ. ಮೊದಲು ಈ ಸಿನಿಮಾವನ್ನು ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಮಾಡುವ ಕುರಿತು ಯೋಚಿಸಿತ್ತು ಚಿತ್ರತಂಡ. ಆದರೆ ಸಿನಿಮಾ ಥಿಯೇಟರ್‌ಗಳು ಪುನಾರಾರಂಭಗೊಂಡಿದ್ದು ಡಿಸೆಂಬರ್ 11ಕ್ಕೆ ಥಿಯೇಟರ್‌ನಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

ಎಲ್ಲವೂ ಸರಿಯಾಗಿದ್ದರೆ ಕಳೆದ ಜೂನ್ 5ಕ್ಕೆ ಇಂದೂ ಕಿ ಜವಾನಿ ತೆರೆ ಕಾಣಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT