ಬಾಲಿವುಡ್‌ ಹಿರಿಯ ನಟ ರಾಜ್‌ ಕಪೂರ್‌ ಪತ್ನಿ ಕೃಷ್ಣಾ ರಾಜ್‌ ಕಪೂರ್‌ ನಿಧನ

7

ಬಾಲಿವುಡ್‌ ಹಿರಿಯ ನಟ ರಾಜ್‌ ಕಪೂರ್‌ ಪತ್ನಿ ಕೃಷ್ಣಾ ರಾಜ್‌ ಕಪೂರ್‌ ನಿಧನ

Published:
Updated:

ಮುಂಬೈ: ಬಾಲಿವುಡ್‌ ಹಿರಿಯ ನಟ ರಾಜ್‌ ಕಪೂರ್‌ ಅವರ ಪತ್ನಿ ಕೃಷ್ಣಾ ರಾಜ್‌ ಕಪೂರ್‌ (87) ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

‘ನನ್ನ ತಾಯಿ, ಹೃದಯ ಸ್ತಂಭನದಿಂದ (Cardiac Arrest) ಇಂದು ಮುಂಜಾನೆ 5 ಗಂಟೆಗೆ ನಿಧನರಾಗಿದ್ದಾರೆ. ಅವರ ಅಗಲಿಕೆ ನಮಗೆ ತೀವ್ರ ಆಘಾತ ಉಂಟು ಮಾಡಿದೆ’ ಎಂದು ಕೃಷ್ಣಾ ಕಪೂರ್‌ ಅವರ ಮಗ ರಣಧೀರ್‌ ಕಪೂರ್‌ ತಿಳಿಸಿದ್ದಾರೆ.

ಕೃಷ್ಣಾ ಕಪೂರ್‌, 1946ರ ಮೇ ತಿಂಗಳಿನಲ್ಲಿ ರಾಜ್‌ ಕಪೂರ್‌ ಅವರನ್ನು ವಿವಾಹವಾಗಿದ್ದರು. ಅವರು ಪುತ್ರರಾದ ರಿಷಿ ಕಪೂರ್, ರಣಧೀರ್‌ ಕಪೂರ್‌, ರಾಜೀವ್ ಕಪೂರ್ ಹಾಗೂ ಪುತ್ರಿಯರಾದ ರಿತು ನಂದಾ ಮತ್ತು ರೀಮಾ ಕಪೂರ್ ಅವರನ್ನು ಅಗಲಿದ್ದಾರೆ.

ಚೆಂಬೂರ್‌ ಶವಾಗಾರದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೃಷ್ಣಾ ಕಪೂರ್‌ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

*
🕉🙏🏻🕉 Condolences to the entire Kapoor family. An era passes away,#KrishnaRajKapoor .God give you strength,and may the soul rest in peace. Om Shanti. @chintskap

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 5

  Sad
 • 0

  Frustrated
 • 1

  Angry

Comments:

0 comments

Write the first review for this !