ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆವಿಎನ್‌ನಿಂದ ವಿಜಯ್‌ ಸಿನಿಮಾ ನಿರ್ಮಾಣ

Published : 14 ಸೆಪ್ಟೆಂಬರ್ 2024, 0:25 IST
Last Updated : 14 ಸೆಪ್ಟೆಂಬರ್ 2024, 0:25 IST
ಫಾಲೋ ಮಾಡಿ
Comments

ಇತ್ತೀಚೆಗಷ್ಟೇ ರಾಜಕೀಯ ಅಖಾಡಕ್ಕೆ ಇಳಿದ ತಮಿಳುನಾಡಿನ ಖ್ಯಾತ ನಟ ದಳ‍ಪತಿ ವಿಜಯ್ ಅವರ ಕೊನೆಯ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಲಿದೆ. ಇದು ವಿಜಯ್‌ ಅವರ 69ನೇ ಸಿನಿಮಾ. 

ಕನ್ನಡದಲ್ಲಿ ‘ಸಖತ್‌’ ಸಿನಿಮಾ ಮೂಲಕ ಚಿತ್ರ ನಿರ್ಮಾಣಕ್ಕೆ ಇಳಿದಿದ್ದ ಕೆವಿಎನ್‌ ಪ್ರೊಡಕ್ಷನ್ಸ್‌ ಇದೀಗ ಈ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಡಲಿದೆ. ಈ ಚಿತ್ರವನ್ನು ಕೆವಿಎನ್‌ನ ಕೆ.ವೆಂಕಟ್‌ ನಾರಾಯಣ ಅವರು ₹500ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣ ಮಾಡಲಿದ್ದಾರೆ ಎಂದಿದೆ ಚಿತ್ರತಂಡ. ವಾರದ ಹಿಂದೆ ವಿಜಯ್‌ ನಟನೆಯ ‘ಗೋಟ್‌–ಗ್ರೇಟೆಸ್ಟ್‌ ಆಫ್‌ ಆಲ್‌ ಟೈಂ’ ಸಿನಿಮಾ ಬಿಡುಗಡೆಯಾಗಿತ್ತು. ವೆಂಕಟ್‌ ಪ್ರಭು ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ವಿಜಯ್‌ ಅವರ ಕೊನೆ ಸಿನಿಮಾ ಇದಾಗಿರಲಿದೆ ಎನ್ನುವ ಸುದ್ದಿಯೂ ಚಿತ್ರಮಂದಿರಕ್ಕೆ ಜನರ ಹರಿವನ್ನು ಹೆಚ್ಚಿಸಿತ್ತು. ಆದರೆ ‘ಗೋಟ್‌’ ವಿಜಯ್‌ ಕೊನೆಯ ಸಿನಿಮಾವಲ್ಲ, ಮತ್ತೊಂದು ಸಿನಿಮಾವನ್ನು ವಿಜಯ್‌ ಮಾಡಲಿದ್ದಾರೆ ಎಂದು ವೆಂಕಟ್‌ ಪ್ರಭು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು.  

ಕೆವಿಎನ್‌ ನಿರ್ಮಾಣ ಮಾಡಲಿರುವ ಈ ಸಿನಿಮಾ ವಿಜಯ್ ಸಿನಿಪಯಣದ ಕೊನೆಯ ಸಿನಿಮಾ ಆಗಿರಲಿದೆ. ‘ತಮಿಳಗ ವೆಟ್ರಿ ಕಳಗಂ’ ಎನ್ನುವ ಪಕ್ಷ ಸ್ಥಾಪಿಸಿರುವ ವಿಜಯ್‌ ಈ ಸಿನಿಮಾ ಬಳಿಕ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅವರ ಕೊನೆಯ ಸಿನಿಮಾ ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರುವ ಕಥೆ ಎಂದು ಹೇಳಲಾಗುತ್ತಿದೆ. ವಿಜಯ್ ರಾಜಕೀಯ ಭವಿಷ್ಯಕ್ಕೆ ಈ ಚಿತ್ರ ಭವ್ಯ ಮೆಟ್ಟಿಲಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಎಚ್.ವಿನೋದ್ ನಿರ್ದೇಶಿಸಲಿದ್ದು, ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಐದನೇ ಚಿತ್ರ ಇದಾಗಿರಲಿದೆ. 

ಸದ್ಯ ಕನ್ನಡದ ಎರಡು ಪ್ರಮುಖ ಚಿತ್ರಗಳಿಗೆ ಕೆವಿಎನ್‌ ಬಂಡವಾಳ ಹೂಡಿದೆ. ಪ್ರೇಮ್‌ ನಿರ್ದೇಶನದ ‘ಕೆಡಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದರೆ, ‘ಟಾಕ್ಸಿಕ್‌’ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. 

ಕೆ.ವೆಂಕಟ್‌ ನಾರಾಯಣ 
ಕೆ.ವೆಂಕಟ್‌ ನಾರಾಯಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT