ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಫ್ನ ಅಂ.ರಾಷ್ಟ್ರೀಯ ಚಿತ್ರೋತ್ಸವ: ಗಿರೀಶ ಕಾಸರವಳ್ಳಿಗೆ ಜೀವಮಾನ ಸಾಧನೆ ಪ್ರಶಸ್ತಿ

Published : 10 ಸೆಪ್ಟೆಂಬರ್ 2024, 20:52 IST
Last Updated : 10 ಸೆಪ್ಟೆಂಬರ್ 2024, 20:52 IST
ಫಾಲೋ ಮಾಡಿ
Comments

ಬೆಂಗಳೂರು: ನಿರ್ದೇಶಕ ಗಿರೀಶ ಕಾಸರವಳ್ಳಿ ಅವರಿಗೆ ಇತ್ತೀಚೆಗಷ್ಟೇ ಜಾಫ್ನ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಐದು ದಶಕ ಚಿತ್ರೋದ್ಯಮದಲ್ಲಿ ರಾಜಿ ಮಾಡಿಕೊಳ್ಳದೆ ತಮ್ಮ ನಿಲುವುಗೆ ಬದ್ಧವಾಗಿ ಸದಭಿರುಚಿಯ ಗಂಭೀರ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಚಿತ್ರಗಳು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

‘ವೆನಿಸ್ ಚಿತ್ರೋತ್ಸವದಲ್ಲಿ ಪುನರುಜ್ಜೀವನ (ರೆಸ್ಟೋರೇಶನ್) ಪಡೆದ ನನ್ನ ಮೊದಲ ಚಿತ್ರ ‘ಘಟಶ್ರಾದ್ಧ’ ಪ್ರದರ್ಶನದಲ್ಲಿ ಸಿಕ್ಕ ಅಪಾರ ಮನ್ನಣೆ ಉತ್ತೇಜಕವಾಗಿತ್ತು. ಚಿತ್ರದ ಕಥಾವಸ್ತು, ಅದರ ದೃಶ್ಯ, ಸಂಗೀತ, ಚಿತ್ರದ ಲಯದ ಬಗ್ಗೆ ಅಪಾರ ಚರ್ಚೆಯಾಯಿತು’ ಎಂದು ನಿರ್ದೇಶಕ ಗಿರೀಶ ಕಾಸರವಳ್ಳಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT