ಮಂಗಳವಾರ, ಮಾರ್ಚ್ 21, 2023
30 °C

ಪ್ರೇಮಿಗಳ ದಿನಕ್ಕಾಗಿ ಮತ್ತೆ ತೆರೆಗೆ ಬರುತ್ತಿದೆ ‘ಲೈಫು ಇಷ್ಟೇನೆ’

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ದಿಗಂತ್‌ ಅವರ ‘ಲೈಫು ಇಷ್ಟೇನೆ’ ಸಿನಿಮಾ ಮತ್ತೆ ತೆರೆಯ ಮೇಲೆ ಬರಲು ಸಿದ್ಧವಾಗಿದೆ.

ಫೆ. 10ರಂದು ಸಿನಿಮಾವನ್ನು ರೀರಿಲೀಸ್‌ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಆದರೆ, ಸೀಮಿತ ಚಿತ್ರಮಂದಿಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಚಿತ್ರದ ನಿರ್ದೇಶಕ ಪವನ್‌ ಕುಮಾರ್‌, ’ ವ್ಯಾಲೆಂಟೈನ್ಸ್‌ (ಪ್ರೇಮಿಗಳ ದಿನದ) ವಾರದಲ್ಲಿ ಹುಡುಗರು, ಹುಡುಗಿಯರು, ಪುರುಷರು, ಮಹಿಳೆಯರಿಗಾಗಿ ನನ್ನ ಮೊದಲ ಚಲನಚಿತ್ರ "ಲೈಫು ಇಷ್ಟೇನೆ" ಸೀಮಿತ ಚಿತ್ರಮಂದಿಗಳಲ್ಲಿ ಮರು-ಬಿಡುಗಡೆಯಾಗಲಿದೆ. ಫೆ.10ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ. ಇದೊಂದು ರೊಮ್ಯಾಂಟಿಕ್ ಕಾಮಿಡಿ’ ಎಂದು ಅವರು ಹೇಳಿದ್ದಾರೆ.

ಲೈಫು ಇಷ್ಟೇನೆ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಮತ್ತು ಸಂಯುಕ್ತ ಹೊರನಾಡು, ರಮ್ಯಾ ಬಾರ್ನ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅನಂತ್ ನಾಗ್, ಸಿಂಧು ಲೋಕನಾಥ್, ಮೊದಲಾದವರ ತಾರಾ ಬಳಗವೇ ಚಿತ್ರದಲ್ಲಿದೆ.

ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ಮತ್ತು ಮನೋಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಸಿನಿಮಾ 2011ರಲ್ಲಿ ಬಿಡುಗಡೆಯಾಗಿತ್ತು.

ನಿರ್ದೇಶಕ ಪವನ್ ಕುಮಾರ್ ಸದ್ಯ ಧೂಮಮ್ ಚಿತ್ರ ಹೊರತರುವಲ್ಲಿ ನಿರತರಾಗಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮರುರಳಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಹೊಂಬಾಳೆ ಫಿಲ್ಮ್ಸ್‌’ ಈ ಚಿತ್ರ ನಿರ್ಮಾಣ ಮಾಡುತ್ತಿದೆ.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು