ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಸ: ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಮಾರ್ಚ್‌ 4ಕ್ಕೆ ತೆರೆಗೆ

ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತರೇ ನಿರ್ಮಿಸಿದ
Last Updated 25 ಫೆಬ್ರುವರಿ 2022, 15:30 IST
ಅಕ್ಷರ ಗಾತ್ರ

ಕಲಬುರಗಿ: ‘ಹೊಸ ಪ್ರತಿಭೆಗಳೇ ಸೇರಿ ಸಿದ್ಧಪಡಿಸಿರುವ ‘ಲೀಸ’ ಕನ್ನಡ ಚಲನಚಿತ್ರವು ಮಾರ್ಚ್‌ 4ರಂದು ರಾಜ್ಯದ 45 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತರು ಸೇರಿ ಮಾಡಿದ ಈ ಚಲನಚಿತ್ರವನ್ನು ಜನರೇ ಗೆಲ್ಲಿಸಬೇಕು’ ಎಂದು ಚಿತ್ರದ ನಾಯಕ ನಟ, ಸಹನಿರ್ಮಾಪಕ ಅವಿನಾಶ ಜನಕಟ್ಟಿ ಮನವಿ ಮಾಡಿದರು.

‘ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನವನ್ನು ಮುತ್ತು ಎಂಬುವರು ನಿರ್ವಹಿಸಿದ್ದಾರೆ. ಅವರಿಗೂ ಇದು ಚೊಚ್ಚಲ ಸಿನಿಮಾ. ನಾಯಕ ನಟನಾಗಿ ನನಗೂ ಮೊದಲ ಸಿನಿಮಾ ಆಗಿದೆ. ಈ ಹಿಂದೆ ಡಾನ್ಸರ್‌ ಆಗಿ ಉದ್ಯಮದಲ್ಲಿ ಕೆಲಸ ಮಾಡಿದ ಅನುಭವವಿದೆ. ಲೀಸ ಚಿತ್ರದಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾನಕವಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಹಿಳಾ ಪ್ರಧಾನವಾದ ಈ ಚಿತ್ರದ ಮೂಲಕ ಭ್ರಮೆಯ ಲೋಕವನ್ನು ಅನಾವರಣಗೊಳಿಸಲು ಯತ್ನಿಸಿದ್ದೇವೆ. ಹದಿ ಹರೆಯದವರು ಹೇಗೆ ಭ್ರಮಾಲೋಕದಲ್ಲಿ ಸಿಲುಕುತ್ತಾರೆ. ಅದರಿಂದ ಹೊರಬರಲು ಏನೆಲ್ಲ ಕಸರತ್ತು ಮಾಡುತ್ತಾರೆ ಎನ್ನುವ ಸನ್ನಿವೇಶಗಳನ್ನು ನಿರ್ದೇಶಕರು ತುಂಬ ಮನೋಜ್ಞವಾಗಿ ಮೂಡಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಇದರ ಟ್ರೇಲರ್‌ ಬಿಡುಗಡೆ ಮಾಡಿದ್ದು, 48 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಹೀಗಾಗಿ, ಚಿತ್ರಮಂದಿರದಲ್ಲೂ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ನಿರೀಕ್ಷಿಸಿದ್ದೇವೆ’ ಎಂದರು.

ಚಿತ್ರದ ನಿರ್ಮಾಪಕ ಚಂದ್ರಕಾಂತ ಕೊರಳ್ಳಿ ಮಾತನಾಡಿ, ‘ಪಾರ್ವತಿ ತಾಯಿ ಕೊರಳ್ಳಿ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ನಿರ್ಮಿಸಿದ ಈ ಚಿತ್ರಕ್ಕೆ ₹ 1 ಕೋಟಿ ವೆಚ್ಚ ಮಾಡಿದ್ದೇವೆ.ಬೆಂಗಳೂರು, ಬೀದರ್, ಜಲಸಂಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಹಲವು ಕಡೆ ಚಿತ್ರೀಕರಣ ಮಾಡಿದ್ದೇವೆ. ಐವರು ನಟಿಯರು ಇರುವುದು ಇದರ ಇನ್ನೊಂದು ವಿಶೇಷ. ಬ್ಯಾಚುಲರ್‌ ಜೀವನದಲ್ಲಿ ಏನೆಲ್ಲ ತಿರುವುಗಳು ಬರುತ್ತವೆ ಎನ್ನುವುದನ್ನು ಮನಮುಟ್ಟುವಂತೆ ತಲುಪಿಸಲು ಯತ್ನಿಸಿದ್ದೇವೆ. ಜನರು ಆಶೀರ್ವಾದ ಮಾಡಿ ಈ ಭಾಗದ ನಟರು, ನಿರ್ದೇಶಕರು, ನಿರ್ಮಾಪಕರನ್ನು ಬೆಳೆಸಬೇಕು’ ಎಂದು ಕೋರಿದರು.

ನಟ ಅವಿನಾಶ ಅವರ ತಾಯಿ ಸುಮಂಗಲಾ ಜನಕಟ್ಟಿ, ಎಂ.ಎಸ್.ಪಾಟೀಲ ನರಿಬೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT