ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಕಲಿತ ಹತ್ತು ಪಾಠಗಳ ಬಗ್ಗೆ ಇಲ್ಲಿ ವಿವರಿಸಬಹುದು.

l ವೃತ್ತಿಸಂಬಂಧಿ ಕೌಶಲಗಳಾದ ಎಡಿಟಿಂಗ್, ಕೀಬೋರ್ಡ್ ಇತ್ಯಾದಿ ಆರಂಭಿಕ ಪಾಠಗಳನ್ನು ಕಲಿತೆ

l ದುರ್ಜನರಿಂದ ಮಾತ್ರವಲ್ಲ; ಸಜ್ಜನರಿಂದಲೂ ಅಂತರ ಕಾಯ್ದುಕೊಳ್ಳಬೇಕು ಎಂಬ ಹೊಸ ಪಾಠ ಕಲಿತೆ!

l ‘ಸತ್ಯಾನ್ವೇಷಣೆ’ ಎಂಬ ದೊಡ್ಡ ದೊಡ್ಡ ಮಾತು ಹೇಳಿಕೊಂಡು ಅಲೆಮಾರಿಯಾಗಿ ಲೋಕ ಸುತ್ತುತ್ತಿದ್ದವನು ನನ್ನ ಪುಟ್ಟ ಮನೆಯೊಳಗೂ ಅದೆಷ್ಟು ಅಗಾಧ ಪ್ರೀತಿಯ, ಶಾಂತಿಯ ಮತ್ತು ನೆಮ್ಮದಿಯ ಲೋಕವಿದೆ ಎಂಬ ಒಳನೋಟದ ಪಾಠ ಕಲಿತೆ

l ಈ ಕೃತಜ್ಞರನ್ನು ಸ್ಮರಿಸಲು, ಮೆಚ್ಚಲು ಕಲಿತೆ. ಆ ಕೃತಘ್ಞರನ್ನು ಕ್ಷಮಿಸಲು, ಮರೆಯಲು ಕಲಿತೆ

l ತಾರುಣ್ಯದ ಕಡುಕಷ್ಟದ ದಿನಗಳ ದುಡಿತದಿಂದ ನಿದ್ರೆಯನ್ನು ಬಹುಕಾಲ ನೀಗಿಕೊಂಡಿದ್ದವನು ಮಟಮಟ ಮಧ್ಯಾಹ್ನವೇ ಮಲಗುವುದನ್ನು ಕಲಿತೆ

l ಜನಜಂಗುಳಿ ಇಲ್ಲದೆ ಸಾಹಿತ್ಯ, ಸಂಗೀತ ಕೊನೆಗೆ ಸಿನಿಮಾವನ್ನೂ ಏಕಾಂಗಿಯಾಗಿ ನಿರುದ್ದಿಶ್ಯವಾಗಿ ಧ್ಯಾನಿಸಬಹುದು ಎಂದು ಅರಿತೆ

l ಗುಂಪುಗದ್ದಲವಿಲ್ಲದೆಯೂ, ಟಿ.ವಿಯಲ್ಲಿ ಠೀವಿಯಿಂದ ಕಾಣಿಸದೆಯೂ ನೊಂದವರಿಗೆ ನೆರವಾಗಬಹುದು ಎಂದು ಅರಿತೆ

l ನಾನು ಸರಳ ಮದುವೆಯಾದವ ಮತ್ತು ಸರಳ ಮದುವೆಗಳನ್ನು ಬೋಧಿಸಿದವ. ಆದರೆ, ಅನಿವಾರ್ಯವಾಗಿ ಗೆಳೆಯರ, ಬಂಧುಬಾಂಧವರ ದುಬಾರಿ ಮದುವೆಗಳಿಗೆ/ ಖಾಸಗಿ ಸಮಾರಂಭಗಳಿಗೆ ಹೋಗಬೇಕಾಗುತ್ತಿತ್ತು. ಈ ಅನಿವಾರ್ಯತೆ ತಪ್ಪಿಸಿದ ಕೋವಿಡ್ ಒಲ್ಲದ್ದನ್ನು ಒಲ್ಲೆ ಎನ್ನುವ ಶಾಶ್ವತ ಪಾಠ ಕಲಿಸಿತು

l ಹಳೆಯ ಡೈರಿ/ಆಲ್ಬಂ ತಿರುವಿ ಹಾಕಿ ಅರ್ಹರನ್ನು ಗುರುತಿಸಿ ಕರೆ ಮಾಡಿದೆ. ಎಂದೋ ಆಗಿರುವ ತಪ್ಪುಗಳಿಗೆ ಸಾರಿ ಕೇಳಿದೆ

l ಆಗಸ್ಟ್ 15 ನನ್ನ ಜನ್ಮ ದಿನ. ಈ ಸಲ ವಿದ್ಯಾರ್ಥಿಗಳಿಗೆ ಮೂರು ತಾಸು ಆನ್ಲೈನ್ ಉಚಿತ ಪಾಠ ಹೇಳಿದೆ

ನಾಗತಿಹಳ್ಳಿ ಚಂದ್ರಶೇಖರ್
ಚಲನಚಿತ್ರ ನಿರ್ದೇಶಕ ಮತ್ತು ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.