ಸೋಮವಾರ, ಮಾರ್ಚ್ 27, 2023
21 °C

ಹೊಸ ರೆಸಿಪಿಯ ಸಂಭ್ರಮ

ನಿರೂಪಣೆ: ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ನಾನು ಅಡುಗೆ ಮಾಡುತ್ತಿರಲಿಲ್ಲ. ಮಾಡುವ ಪ್ರಯತ್ನ ಕೂಡ ಮಾಡಿರಲಿಲ್ಲ. ಕೊರೊನಾ ಲಾಕ್‌ಡೌನ್‌ನಲ್ಲಿ ಸಿಕ್ಕಿದ ಸಮಯವನ್ನು ಅಡುಗೆ ಕಲಿತುಕೊಳ್ಳಲು ಬಳಸಿಕೊಂಡೆ. ತುಂಬಾ ರುಚಿಕರ ರೆಸಿಪಿಯನ್ನು ಕಲಿತೆ. ಅದರ ಹೆಸರು ‘ಸೋಯಾ ಚಂಕ್ಸ್’. ಇದು ಚೀನಿ ರೆಸಿಪಿ. ನನ್ನ ಸ್ನೇಹಿತೆಯರು ‘ಈ ರೆಸಿಪಿ ತುಂಬಾ ಚೆನ್ನಾಗಿದೆ. ಒಮ್ಮೆ ಟ್ರೈ ಮಾಡಿ ನೋಡು’ ಎಂದಿದ್ದರು. ಈ ಬಾರಿ ಅದನ್ನು ಸಾಧಿಸಿಬಿಟ್ಟೆ. 

ಮೊದಲ ಬಾರಿಗೆ ನಾನ್‌ವೆಜ್‌ ರೆಸಿಪಿ ಮಾಡುವುದು ಕಷ್ಟವಾಗುತ್ತದೆ ಎಂದುಕೊಂಡು, ನನ್ನ ಸ್ನೇಹಿತೆಯರು ಹೇಳಿಕೊಟ್ಟಿದ್ದ ಕೆಲವು ರೆಸಿಪಿಗಳನ್ನು ಪ್ರಯೋಗ ಮಾಡಿ ನೋಡಿದೆ, ತುಂಬಾ ಚೆನ್ನಾಗಿ ಬಂತು. ರೆಸಿಪಿಯ ರುಚಿ ನೋಡಿ ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿಂದರು. ಅದಂತೂ ತುಂಬಾ ಖುಷಿ ನೀಡಿತು. ಈಗ ಯಾರಾದರೂ ಸ್ಪೆಷಲ್‌ ರೆಸಿಪಿ ಕೇಳಿದರೆ ಸೋಯಾ ಚಂಕ್ಸ್ ಮಾಡಲೇ ಎನ್ನುವೆ. 

ಪುಸ್ತಕಗಳನ್ನು ಓದುವ ಹವ್ಯಾಸ ಕೂಡ ಇರಲಿಲ್ಲ. ಲಾಕ್‌ಡೌನ್‌ ಅವಧಿ ನನ್ನ ಮನಸ್ಸು ಪುಸ್ತಕಗಳತ್ತ ಹೊರಳುವಂತೆ ಮಾಡಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ನಾನು ಅರಿಯುವುದನ್ನು ಕಲಿತೆ.

ರಚಿತಾ ರಾಮ್‌, ನಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು