ಅಲೆಮಾರಿಗಳ ಅಂತರಂಗ

7

ಅಲೆಮಾರಿಗಳ ಅಂತರಂಗ

Published:
Updated:
Prajavani

ಆಂಗ್ಲ ಭಾಷೆಯಲ್ಲಿ ಅಲೆಮಾರಿಗಳಿಗೆ ಲೋಪರ್ಸ್‌ ಎಂದು ಕರೆಯಲಾಗುತ್ತದೆ. ಇದೇ ಹೆಸರಿನಡಿ ನಿರ್ಮಾಣವಾಗಿರುವ ಸಿನಿಮಾವೊಂದು ಈಗ ಬಿಡುಗಡೆಗೆ ಸಿದ್ಧವಾಗಿದೆ. 

‘ಲೋಫರ್ಸ್’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಇತ್ತೀಚೆಗೆ ನಡೆಯಿತು. ಪತ್ರಕರ್ತರನ್ನು ಹೊರತುಪಡಿಸಿದರೆ ಯಾರೊಬ್ಬರೂ ಅತಿಥಿಗಳು ಇರಲಿಲ್ಲ.   ಥ್ರಿಲ್ಲರ್, ಆ್ಯಕ್ಷನ್ ಚಿತ್ರ ಇದು. ಕಥೆಯಲ್ಲಿ ಏಳು ಅಬ್ಬೆಪಾರಿಗಳ ಬದುಕಿನ ಚಿತ್ರಣ ಇದೆಯಂತೆ. ನಕಾರಾತ್ಮಕ ಧೋರಣೆಯ ಹುಡುಗ ಮತ್ತು ಹುಡುಗಿಯರು ಒಂದೇ ಅತಿಥಿ ಗೃಹದಲ್ಲಿ ತಂಗುತ್ತಾರೆ. ಅವರೆಲ್ಲಾ ಅನಾಥರು. ದಿಕ್ಕುದೆಸೆ ಇಲ್ಲದೆ ಇರುತ್ತಾರೆ. ಅವರ ಸುತ್ತವೇ ಕಥೆ ಸಾಗಲಿದೆಯಂತೆ. 

ಹೊಸ ಸಿನಿಮಾದ ಮುಹೂರ್ತದ ಸಿದ್ಧತೆಯಲ್ಲಿದ್ದ ನಿರ್ದೇಶಕ ಮೋಹನ್‌, ‘ಎರಡು ಹಾಡುಗಳಿಗೆ ನಾನು ಹಾಗೂ ಹರೀಶ್ ಬಿ. ರಾಯ್ ಸಾಹಿತ್ಯ ಬರೆದಿದ್ದೇವೆ. ಇದು ಒಂದು ಜಾನರ್‌ಗೆ ಸಂಬಂಧಿಸಿದ ಕಥೆ ಎಂದು ಹೇಳಲು ಆಗುವುದಿಲ್ಲ. ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ’ ಎಂದಷ್ಟೇ ಮಾಹಿತಿ ನೀಡಿದರು.

ಚಿತ್ರದಲ್ಲಿ ಚೇತನ್, ಅರ್ಜುನ್‌, ಮನೋಹರ್, ಕೆಂಪೇಗೌಡ ನಾಯಕರಾಗಿ ಬಣ್ಣಹಚ್ಚಿದ್ದಾರೆ. ನಾಯಕಿಯರಾಗಿ ಸಾಕ್ಷಿ, ಸುಷ್ಮಾ ರಾವ್, ಶ್ರಾವ್ಯಾ ಕಾಣಿಸಿಕೊಂಡಿದ್ದಾರೆ. 

ಯುವಜನಾಂಗ ಏನು ಮಾಡಬಾರದು, ಮಾಡಿದರೂ ಅದನ್ನು ಒಂದು ಹಂತದವರೆಗೆ ಮಿತಿಯಲ್ಲಿ ಇಟ್ಟುಕೊಳ್ಳಬೇಕು. ಮಾದಕ ದ್ರವ್ಯ ಸೇವನೆಯ ವ್ಯಸನದಿಂದ ದೂರ ಇರಬೇಕು ಎಂಬ ಸಂದೇಶ ಹೇಳಲಾಗಿದೆಯಂತೆ.  ನಿರ್ಮಾಪಕ ಬಿ.ಎನ್. ಗಂಗಾಧರ್ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಪ್ರಸಾದ್‍ಬಾಬು ಅವರದ್ದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !