ಸೋಮವಾರ, ಜೂನ್ 14, 2021
20 °C

ಪಂಚ ಭಾಷೆಗಳಲ್ಲಿ ‘ಮಾನಾಡು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್ ನಟ ಸಿಲಂಬರಸನ್ ಟಿ.ಆರ್. ನಟನೆಯ ‘ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗಿನಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದರು.

ಸದ್ಯ ಕನ್ನಡದ ಶೀರ್ಷಿಕೆ ಬದಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಹೆಸರನ್ನು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ. ಇತ್ತೀಚೆಗೆ ನಡೆದ ದೃಶ್ಯವೊಂದರ ಚಿತ್ರೀಕರಣದಲ್ಲಿ ಆರು ನಿಮಿಷದ ಸಂಭಾಷಣೆಯನ್ನು ಒಂದೇ ಟೇಕ್‌ನಲ್ಲಿ ಮುಗಿಸಲಾಗಿತ್ತು.

‘ಮಾನಾಡು’ ರಾಜಕೀಯ ಕಥಾ ವಸ್ತುವನ್ನು ಒಳಗೊಂಡಿದೆ. ವೆಂಕಟೇಶ್‌ ಪ್ರಭು ಅವರ ಕಥೆ ಹಾಗೂ ನಿರ್ದೇಶನ, ಯುವನ್‌ ಶಂಕರ್‌ರಾಜ ಅವರ ಸಂಗೀತ ಇದೆ. ರಿಚರ್ಡ್ ಎಂ.ನಾಥನ್ ಅವರ ಛಾಯಾಗ್ರಹಣವಿದೆ. ಸುರೇಶ್‌ ಕಮತ್‌ಚಿ ಅವರು ‘ವಿ ಹೌಸ್ ಪ್ರೊಡಕ್ಷನ್’ ಲಾಂಛನದ ಅಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಕಲ್ಯಾಣಪ್ರಿಯಾ ದರ್ಶನ್ ಅವರು ಚಿತ್ರದ ನಾಯಕಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು